Select Your Language

Notifications

webdunia
webdunia
webdunia
webdunia

ನಿವೃತ್ತಿ ಬಳಿಕ ಇಲ್ಲಿ ಸೇವೆ ಮಾಡುವ ಆಸೆ ಎಂದ ಮಿಥಾಲಿ ರಾಜ್

ನಿವೃತ್ತಿ ಬಳಿಕ ಇಲ್ಲಿ ಸೇವೆ ಮಾಡುವ ಆಸೆ ಎಂದ ಮಿಥಾಲಿ ರಾಜ್
ಮುಂಬೈ , ಶನಿವಾರ, 11 ಜೂನ್ 2022 (17:38 IST)
ಮುಂಬೈ: ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದ ಮಹಿಳಾ ಕ್ರಿಕೆಟ್ ತಾರೆ ಮಿಥಾಲಿ ರಾಜ್ ತಮ್ಮ ಮುಂದಿನ ನಡೆ ಬಗ್ಗೆ ಹೇಳಿದ್ದಾರೆ.

ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಸಾಮಾನ್ಯವಾಗಿ ಆಟಗಾರರು ಕಾಮೆಂಟರಿ ಅಥವಾ ಕೋಚಿಂಗ್ ಹುದ್ದೆ ಆಯ್ಕೆ ಮಾಡುತ್ತಾರೆ. ಆದರೆ ಮಿಥಾಲಿ ರಾಜ್ ಬಿಸಿಸಿಐ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ಬಯಸುವುದಾಗಿ ಹೇಳಿದ್ದಾರೆ.

22 ವರ್ಷಗಳ ವೃತ್ತಿ ಬದುಕಿನಲ್ಲಿ 333 ಪಂದ್ಯಗಳನ್ನಾಡಿರುವ ಮಿಥಾಲಿ ತಮ್ಮ ಅನುಭವ ಬಿಸಿಸಿಐ ಆಡಳಿತ ಮಂಡಳಿಯಲ್ಲಿ ಸರಿಯಾಗಿ ಬಳಕೆಯಾಗಬಹುದು ಎಂದಿದ್ದಾರೆ. ಮಹಿಳೆಯೊಬ್ಬರು ಬಿಸಿಸಿಐ ಹುದ್ದೆಯಲ್ಲಿದ್ದರೆ ಮಹಿಳಾ ಕ್ರಿಕೆಟ್ ಸುಧಾರಣೆಗೆ ಅವಕಾಶ ಸಿಗುತ್ತದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಟಕ್ ಗೆ ಬಂದಿಳಿದ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ