Publish Date: Wed, 15 Jun 2022 (10:30 IST)
Updated Date: Wed, 15 Jun 2022 (10:43 IST)
ಬೆಂಗಳೂರು: ಕನ್ನಡದ ಕ್ರಿಯೇಟಿವ್ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಹರಿಕತೆ ಅಲ್ಲ ಗಿರಿಕತೆ ಜೂನ್ 23 ಕ್ಕೆ ತೆರೆಗೆ ಬರುತ್ತಿದೆ. ಈ ಸಿನಿಮಾದ ಟ್ರೈಲರ್ ಈಗ ಬಿಡುಗಡೆಯಾಗಿದೆ.
ಟ್ರೈಲರ್ ನೋಡಿದರೆ ನಿರ್ದೇಶಕನಾಗಿ ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದಾಡುವ ವ್ಯಕ್ತಿಯಾಗಿ ರಿಷಬ್ ಪಾತ್ರ ಮಾಡಿದಂತೆ ತೋರುತ್ತಿದೆ. ಇದರ ನಡುವೆ ಸಾಕಷ್ಟು ತಮಾಷೆ, ಮನೋರಂಜನೆಯಿದ್ದು, ಪ್ರೇಕ್ಷಕರ ಮುಖದಲ್ಲಿ ನಗು ತರುವುದು ಗ್ಯಾರಂಟಿ.