Select Your Language

Notifications

webdunia
webdunia
webdunia
webdunia

ಬಾಡಿಗಾರ್ಡ್ ತಡೆದ ರಶ್ಮಿಕಾ ಮಂದಣ್ಣಗೆ ನೆಟ್ಟಿಗರ ಹೊಗಳಿಕೆ

ಬಾಡಿಗಾರ್ಡ್ ತಡೆದ ರಶ್ಮಿಕಾ ಮಂದಣ್ಣಗೆ ನೆಟ್ಟಿಗರ ಹೊಗಳಿಕೆ
ಮುಂಬೈ , ಬುಧವಾರ, 15 ಜೂನ್ 2022 (16:29 IST)
ಮುಂಬೈ: ಟಾಲಿವುಡ್ ನಿಂದ ಬಾಲಿವುಡ್ ನಲ್ಲೂ ಪಾಪ್ಯುಲರ್ ಆಗಿರುವ ರಶ್ಮಿಕಾ ಮಂದಣ್ಣ ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಗೆ ಹಾಕುವುದು ಸಹಜ.

ತಮ್ಮ ನೆಚ್ಚಿನ ನಟಿಯನ್ನು ಕಂಡಾಗ ಅಭಿಮಾನಿಗಳು ಒಂದು ಸೆಲ್ಫೀಗಾಗಿ ಮುಗಿಬೀಳುತ್ತಾರೆ. ಇದೇ ರೀತಿ ಅಭಿಮಾನಿಯೊಬ್ಬ ರಶ್ಮಿಕಾ ಜೊತೆ ಫೋಟೋ ತೆಗೆಯಲು ಬಂದಾಗ ಅಂಗರಕ್ಷಕರು ಆತನನ್ನು ನೂಕಿ ಅತ್ತ ಸರಿಸಲು ಯತ್ನಿಸಿದ್ದರು.

ತಕ್ಷಣವೇ ರಶ್ಮಿಕಾ ಅಂಗರಕ್ಷಕರಿಗೆ ಹಾಗೆ ಮಾಡಬೇಡಿ ಎಂದು ಖಡಕ್ ಆಗಿ ಹೇಳಿ ಆ ಅಭಿಮಾನಿಗೆ ಸೆಲ್ಫೀ ನೀಡಿ ಮರಳುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ರಶ್ಮಿಕಾ ಇತರ ಬಾಲಿವುಡ್ ತಾರೆಯರ ಹಾಗಲ್ಲ. ಅಭಿಮಾನಿಗಳ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮ ಎಂದು ಹೇಳಿಕೊಟ್ಟರೂ ಅಪ್ಪ ಎನ್ನುವ ಚಿರು ಪುತ್ರ: ರಾಯನ್ ಹೊಸ ವಿಡಿಯೋ ವೈರಲ್