Publish Date: Mon, 13 Jun 2022 (10:14 IST)
Updated Date: Mon, 13 Jun 2022 (10:15 IST)
ಚೆನ್ನೈ: ಕಮಲ್ ಹಾಸನ್ ನಾಯಕರಾಗಿರುವ ವಿಕ್ರಂ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿ 10 ನೇ ದಿನಕ್ಕೆ ಬಾಕ್ಸ್ ಆಫೀಸ್ ನಲ್ಲಿ 250 ಕೋಟಿ ರೂ. ಗಳಿಕೆ ಮಾಡಿದೆ.
ಕನ್ನಡ ಹೊರತುಪಡಿಸಿ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ವಿಕ್ರಂ ಸಿನಿಮಾ ಭರ್ಜರಿ ಗಳಿಕೆ ಮಾಡಿ ಯಶಸ್ವಿ ಪ್ರದರ್ಶನ ಮುಂದುವರಿಸಿದೆ.
ಈ ನಡುವೆ ಕಮಲ್ ಆಂಡ್ ಟೀಂ ಸಕ್ಸಸ್ ಪಾರ್ಟಿ ಆಯೋಜಿಸಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ಘಟಾನುಘಟಿ ನಟರು ಆಗಮಿಸಿದ್ದಾರೆ.