Publish Date: Mon, 13 Jun 2022 (09:40 IST)
Updated Date: Mon, 13 Jun 2022 (09:42 IST)
ಕೊಚ್ಚಿ: ಮೊನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಟಾಲಿವುಡ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇದೀಗ ಕೇರಳದಲ್ಲಿರುವ ನಯನತಾರಾ ತವರು ಮನೆಗೆ ಬಂದಿದ್ದಾರೆ.
ಮದುವೆಯಾದ ತಕ್ಷಣವೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೋಡಿ ವಿವಾದಕ್ಕೂ ಒಳಗಾಗಿತ್ತು. ನಯನತಾರಾ ಚಪ್ಪಲಿ ಹಾಕಿಕೊಂಡು ಪ್ರಾಂಗಣ ಪ್ರವೇಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ವಿಘ್ನೇಶ್ ಶಿವನ್ ಇದಕ್ಕೆ ಸ್ಪಷ್ಟನೆ ಮತ್ತು ಕ್ಷಮೆ ಯಾಚಿಸಿದ್ದರು.
ಇದೀಗ ನವ ಜೋಡಿ ಕೊಚ್ಚಿಯಲ್ಲಿರುವ ನಯನತಾರಾ ಪೋಷಕರ ಮನೆಗೆ ಬಂದಿದೆ. ನಯನತಾರಾ ತವರು ಮನೆಯಲ್ಲಿ ಆತಿಥ್ಯ ಸ್ವೀಕರಿಸಿ ಚೆನ್ನೈಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.