Select Your Language

Notifications

webdunia
webdunia
webdunia
Saturday, 5 April 2025
webdunia

ತರಾತುರಿಯಲ್ಲಿ ತಪ್ಪು ಮಾಡಿದೆವು: ಕ್ಷಮೆಯಾಚಿಸಿದ ನಯನತಾರಾ-ವಿಘ್ನೇಶ್ ದಂಪತಿ!

Nayantara-Vignesh couple apologizes
bangalore , ಭಾನುವಾರ, 12 ಜೂನ್ 2022 (19:52 IST)
ತಿರುಮತಿ ತಿರುಮಲ ದೇವಸ್ಥಾನದಲ್ಲಿ ಚಪ್ಪಲಿ ಧರಿಸಿದ್ದಕ್ಕೆ ನವ ವಿವಾಹಿತರಾದ ನಯನತಾರಾ ಮತ್ತು ವಿಘ್ನೇಶ್ ಶಿವಂ ಕ್ಷಮೆಯಾಚಿಸಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ಮದುವೆ ಆದ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನದ ದರ್ಶನಕ್ಕೆ ಹೋಗಿದ್ದ ನಯನತಾರಾ ಮತ್ತು ವಿಘ್ನೇಶ್ ದಂಪತಿ ಚಪ್ಪಲಿ ಹಾಕಿಕೊಂಡು ಓಡಾಡಿದ್ದರು. ಅಲ್ಲದೇ ಫೋಟೊ ತೆಗೆಸಿಕೊಂಡಿದ್ದರು.
ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದ್ದೂ ದಂಪತಿ ವರ್ತನೆ ಬಗ್ಗೆ ಅಸಮಧಾನ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿ ಘಟನೆಗೆ ಕ್ಷಮೆಯಾಚಿಸಿದ್ದಾರೆ.
ನಾವು ದೇವಸ್ಥಾನದಲ್ಲಿ ತರಾತುರಿಯಲ್ಲಿ ಬಂದು ಹೋಗುವ ನಡುವೆ ಫೋಟೊ ತೆಗೆಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಚಪ್ಪಲಿ ತೆಗೆಯುವುದನ್ನು ಮರೆತುಬಿಟ್ಟೆವು. ಇದಕ್ಕಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಪ್ರತಿಭಟನೆ