Publish Date: Sun, 12 Jun 2022 (19:50 IST)
Updated Date: Sun, 12 Jun 2022 (19:52 IST)
ರಾಜ್ಯಸಭಾ ಚುನಾವಣೆ ಯಲ್ಲಿ ಜೆಡಿಎಸ್ ಶಾಸಕರು ಅಡ್ಡ ಮತದಾನ ಹೀನ್ನಲೆ ಕಾಂಗ್ರೆಸ್ ಬಿಜೆಪಿ ವಿರುದ್ದ ಜೆಡಿಎಸ್ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕೂರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ ಶರವಣ, ಜೆಡಿಎಸ್ ಬಿಜೆಪಿ ಯ ಬಿ ಟಿಮ್ ಎಂದು ಹೇಳ್ತಿದ್ದಿರಿ, ಡಿಲ್ ರಾಜ ಇಗಾ ಯಾರು ಬಿಜೆಪಿಯ ಬಿ ಟೀಮ್ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ . ಹಾಗೂ ಸಿದ್ದರಾಮಯ್ಯ ಅವ್ರು ಕುಪೇಂದ್ರ ರೆಡ್ಡಿಯವರ ಚುನಾವಣೆ ಬಗ್ಗೆ ಮಾತನಾಡಲು ನಮ್ಮ ಮನೆಗೆ ಬಂದಿಲ್ಲ ಅಂದ್ರು ಹೀಗಾಗಿ ದೇವೇಗೌಡರು ನನ್ನ ,ಫಾರೂಖ್ ಅವರನ್ನು ಅವ್ರು ಮನಗೆ ಕಳಿಸಿದ್ರು ನಾವು ರಾಜ್ಯಸಭೆಯಲ್ಲಿ ಬೆಂಬಲಿಸುವಂತೆ ಕೇಳಿಕೊಂಡೆವು. ಆದ್ರೆ ಹೊರಗೆ ಬಂದು ಶರವಣ ಎಂಎಲ್ಸಿ ಆಗಿದ್ದಕ್ಕೆ ಸ್ವೀಟ್ ಕೊಡೊಕೆ ಬಂದ ಅನ್ನುತ್ತಿರಿ ಇದಕ್ಕೆಲ್ಲ ಏನು ಹೇಳಬೇಕು ನಿಮಗೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.