Select Your Language

Notifications

webdunia
webdunia
webdunia
Thursday, 10 April 2025
webdunia

ಏಷ್ಯಾದಲ್ಲೇ ಅತೀ ಉದ್ದದ ದಂತ ಹೊಂದಿದ್ದ ಮಿಸ್ಟರ್ ಕಬಿನಿ ಇನ್ನಿಲ್ಲ!

kabini mister kabini elefent  ಆನೆ ಕಬಿನಿ ಆನೆ ಕಬಿನಿ ಮೈಸೂರು
bengaluru , ಭಾನುವಾರ, 12 ಜೂನ್ 2022 (16:28 IST)

ಏಷ್ಯಾದಲ್ಲೇ ಅತಿ ಉದ್ದವಾದ ದಂತ ಹೊಂದಿದ್ದ ಮಿಸ್ಟರ್ ಕಬಿನಿ ಖ್ಯಾತಿಯ ಭೋಗೇಶ್ವರ (76) ಮೃತಪಟ್ಟಿದೆ.

ಕಬಿನಿಯ ಹಿನೀರಿನ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಆನೆಯ ಕಳೆಬರ ಪತ್ತೆಯಾಗಿದ್ದು ವಯೋಸಹಜ ಸಾವು ಎಂದು ತಿಳಿದು ಬಂದಿದೆ. ಕಬಿನಿಗೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದ್ದ ಭೋಗೇಶ್ವರನನ್ನು ನೋಡಲು ಜನರು ಎಲ್ಲೆಡೆಯಿಂದ ಆಗಮಿಸುತ್ತಿದದ್ದು ವಿಶೇಷ.

ಸುಮಾರು 4ಅಡಿ ಉದ್ದವಾದ ನೀಳ ದಂತ, ಸುಂದರ ನಡಿಗೆ ಮೂಲಕ ಪ್ರಾಣಿಪ್ರಿಯರ ಅಚ್ಚುಮೆಚ್ಚಾಗಿದ್ದ ಭೋಗೇಶ್ವರ ದಿನಕ್ಕೆ ಆಹಾರ ಅರಿಸುತ್ತಾ 60-70 ಕಿ.ಮೀ ದೂರ ಕ್ರಮಿಸುತ್ತಿತ್ತು ಎಂದು ತಿಳಿದು ಬಂದಿದೆ. ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕಳೆಯುತ್ತಿರಲಿಲ್ಲ ಎಂದು ವರದಿಯಾಗಿದೆ.

ಸದ್ಯ ಭೋಗೇಶ್ವರನ ಸಾವಿಗೆ ಪ್ರಾಣಿ ಪ್ರಿಯರು ಸಂತಾಪ ಸೂಚಿಸಿದ್ದು ದೇವರು ಸದ್ಗತಿ ಕರುಣಿಸಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಫ್ಯಾಷನ್ ಡಿಸೈನರ್ ಅನುಮಾನಸ್ಪದ ಸಾವು