Publish Date: Sat, 11 Jun 2022 (21:04 IST)
Updated Date: Sat, 11 Jun 2022 (21:07 IST)
ಪ್ರವಾದಿಗಳ ನಿಂದನೆ ಹಿನ್ನೆಲೆಯ ನಡೆಯುತ್ತಿರುವ ಹಿಂಸಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷರನ್ನು ಪೊಲೀಸರು ಬಂಧಿಸಿದ್ದಾರೆ.
ಹೌರಾಗೆ ತೆರಳುತ್ತಿದ್ದಾಗ ಬಿಜೆಪಿ ರಾಜ್ಯಾಧ್ಯಕ್ಷ ಸುಕಂತಾ ಮಜುಂದಾರ್ ಅವರನ್ನು ಬಂಧಿಸಲಾಗಿದೆ.
ಇದಕ್ಕೂ ಮುನ್ನ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಯತ್ನಿಸಿದಾಗ ಸುಕಂತಾ ಮಜುಂದಾರ್ ಅವರನ್ನು ಪೊಲೀಸರು ತಡೆದಿದ್ದರು. ಈ ಹಿನ್ನೆಲೆಯಲ್ಲಿ ಬಂಗಲೆಯ ಕಾಂಪೌಂಡ್ ಹಾರಿ ಪೊಲೀಸರ ಬ್ಯಾರಿಕೇಡ್ ಮೇಲೇರಿ ಹೊರಗೆ ಹೋಗಲು ಯತ್ನಿಸಿದ್ದರು.