Select Your Language

Notifications

webdunia
webdunia
webdunia
webdunia

ಇಂದಿನಿಂದ ಮಾಸ್ಕ್ ಕಡ್ಡಾಯಗೊಳಿಸಿದ ಆರೋಗ್ಯ ಇಲಾಖೆ

webdunia
bangalore , ಶನಿವಾರ, 11 ಜೂನ್ 2022 (20:02 IST)
ದಿನದಿಂದ ದಿನಕ್ಕೆ ಕೋವಿಡ್ ಕೇಸಸ್ ಹೆಚ್ಚಾಗ್ತಿದ್ದು, ಈಗ ರಾಜ್ಯ ಸರ್ಕಾರ ಜನರಿಗೆ ಮಾಸ್ಕ್ ಧರಿಸುವಂತೆ ಆದೇಶ ಮಾಡಿದೆ.ಕೊರೊನಾ ಮಹಾಮರಿ ದಿನದಿಂದ ದಿನಕ್ಕೆ ಏರಿಕೆಯಾಗ್ತಿದ್ದು , ಈಗ ಜನರಿಗೆ ಮತ್ತೆ ಭಯ ಹುಟ್ಟಿಸಿದೆ. ಈ ಹಿಂದೆ ಕೋವಿಡ್ ನಿಂದ ಜನರು ಆಕ್ಷರ ಸಹ ತತ್ತರಿಸಿ ಹೋಗಿದ್ರು. ಕೊರೊನಾದ ಅಬ್ಬರಕ್ಕೆ ಶವವನ್ನ ಸುಡಲು ಕೂಡ ಆಗ ಮಸಣ ಸಿಗ್ತಿದಿಲ್ಲ ಅಷ್ಟರ ಮಟ್ಟಿಗೆ ಜನರು  ನಲುಗಿದ್ರು.ಇನ್ನು ಲಾಕ್ ಡೌನ್ ನಿಂದಲ್ಲೂ  ಒಂದು ಹೊತ್ತು ಊಟಕ್ಕೂ ಪರದಾಟ ನಡೆಸ್ತಿದ್ರು. ಆಸ್ಪತ್ರೆಯಲ್ಲಂತೂ ಬೆಡ್ ಸಿಗ್ತಿದಿಲ್ಲ. ಆಗಿನ ಪರಿಸ್ಥಿತಿನ್ನ ನೆನಸಿಕೊಂಡ್ರೆ ಎಷ್ಟೋ ಜನ ಈಗ ಕನಸಿನಲ್ಲೂ ಬೆಚ್ಚಿಬಿಳ್ತಾರೆ. ಆದ್ರೆ ಇಷ್ಟೆಲ್ಲ ಆದ್ರು ಜನರಿಗೆ ಮಾತ್ರ ಬುದ್ದಿ ಬಂದಂತೆ ಕಾಣ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಕೋರೊನಾ ಮರೆತು ಈಗ   ಬೇಜಾವಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ.ಸರ್ಕಾರದ ಆದೇಶಕ್ಕೆ ಕಿಚ್ಚಿತ್ತು ಕಿಮ್ಮತ್ತಿಲ್ಲದಂತಾಗಿದೆ. ಜನರು ಕೋವಿಡ್ ನಿಯಮ ಗಾಳಿಗೆ ತೂರಿ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಇನ್ನು ಮೆಜಸ್ಟಿಕ್ , ಮಾರ್ಕೆಟ್, ರೈಲ್ವೆ ನಿಲ್ದಾಣಗಳಲ್ಲಿ ಜನರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರವನ್ನಂತೂ ಗಾಳಿಗೆ ತೂರಿ ಬಿಟ್ಟಿದ್ದಾರೆ. ಇನ್ನು ಎಷ್ಟೋ ಜನರಿಗೆ ಸರ್ಕಾರದ ಆದೇಶ ಇನ್ನು ಗೊತ್ತಿಲ್ಲ. ಮಾಲ್ , ಹೊಟೇಲ್ , ಕಚೇರಿ, ಶಾಲಾ-ಕಾಲೇಜ್ ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದ್ರು ಜನರು ಮಾತ್ರ ಮಾಸ್ಕ್ ಧರಿಸ್ತಿಲ್ಲ. ಮಾಸ್ಕ್ ಧರಿಸುವುದನ್ನೇ ಮರೆತ್ತಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ ಪ್ರಕರಣ 3.5 ತಿಂಗಳ ಬಳಿಕ 500 ಕೇಸಸ್ ಹೆಚ್ಚಾಗಿದೆ. ಈ ಹಿಂದೆ ಫೆಬ್ರವರಿ 26 ರಂದು 516 ಕೊರೊನಾ ಪ್ರಕರಣಗಳು ವರದಿಯಾಗಿತ್ತು. ಪರೀಕ್ಷಾ ಪಾಸಿಟಿವಿಟಿ ದರ ಕೂಡ ಹೆಚ್ಚಾಗಿದೆ. ಇನ್ನು ಈಗ ಜ್ವರ, ಶೀತ , ಉಸಿರಾಟದ ತೊಂದರೆ ಇದ್ದವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಜೊತೆಗೆ ಕೋವಿಡ್ ಪರೀಕ್ಷೆಯ ಫಲಿತಾಂಶ ಬರುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇನ್ನು ಜನರಂತೂ ಸರ್ಕಾರದ ಆದೇಶದ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ. ಕೊರೊನಾ ಅಂತಾ ಹೆದರಿಸ್ತೀರಾ ಆದ್ರೆ ಶಶ್ವಾತ ಪರಿಹಾರ ಮಾತ್ರ ನೀಡಲ್ಲ. ಮಾಸ್ಕ್ ಹಾಕುವುದು ,ಮತ್ತೆ  ಬಿಡುವುದು . ಇದೇ ಆಗೋಯ್ತು ಅಂತಾ ಸರ್ಕಾರದ ಆದೇಶದ ವಿರುದ್ಧ ಜನರು ಅಕ್ರೋಶ ಹೊರಹಾಕಿದ್ರು.ಕೋವಿಡ್ ಇಲ್ಲ .ಎಲ್ಲ ಮುಗಿತ್ತು ಅಂತಾ ಜನ ನಿಟ್ಟುಸಿರು ಬಿಟ್ಟು ಹೇಗೋ ಇದ್ರು . ಆದ್ರೆ ಈಗ ಮಾಸ್ಕ್ ಧರಿಸುವಂತೆ ಸರ್ಕಾರ ಆದೇಶ ಮಾಡಿರುವುದರಿಂದ ಜನರು ಕಂಗಲಾಗಿದ್ದಾರೆ. ಬೇರೆ ವಿಧಿ ಇಲ್ಲದೇ ಕೆಲವರು ಮಾಸ್ಕ್ ಧರಿಸುತ್ತಿದ್ರೆ ಮತ್ತೆ ಕೆಲವರು ಈಗ ತಾನೇ ಧರಿಸಲು ಮುಂದಾಗ್ತಿದ್ದಾರೆ. ಇನ್ನು ಸರ್ಕಾರದ ಆದೇಶ ಪಾಲನೆ ಮಾಡಿದ್ರೆ ಜನ ಬಚಾವ್ ಇಲ್ಲವಾದ್ರೆ ಕೊರೊನಾ ಮಹಾಮರಿಗೆ ತುತ್ತಾಗಬೇಕಾಗುತ್ತೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಡಗಿನಲ್ಲಿ ಬೆಳಂ ಬೆಳ್ಳಗೆ ಆನೆ ದಾಳಿ