Select Your Language

Notifications

webdunia
webdunia
webdunia
webdunia

ಖ್ಯಾತ ಫ್ಯಾಷನ್ ಡಿಸೈನರ್ ಅನುಮಾನಸ್ಪದ ಸಾವು

Fashion Designer Hyderabad ಹೈದರಾಬಾದ್ ಫ್ಯಾಷನ್ ಡಿಸೈನರ್
bengaluru , ಭಾನುವಾರ, 12 ಜೂನ್ 2022 (16:20 IST)

ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯುಷಾ ಗರಿಮೆಲ್ಲಾ ಶನಿವಾರ ಹೈದರಾಬಾದಿನ ಬಂಜಾರಾ ಹಿಲ್ಸ್ನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ತಮ್ಮದೇ ಹೆಸರಿನಲ್ಲಿ ಬ್ರ್ಯಾಂಡ್ ಸ್ಥಾಪಿಸಿದ್ದ ಪ್ರತ್ಯುಷಾ ಬಂಜಾರಾ ಹಿಲ್ಸ್ನಲ್ಲಿ ಸ್ಟುಡಿಯೋ ಒಂದನ್ನು ಹೊಂದಿದ್ದರು. ಬಾಲಿವುಡ್ ಹಾಗು ಟಾಲಿವುಡ್ನ ಹಲವು ಸೆಲೆಬ್ರಿಟಿಗಳಿಗೆ ವಸ್ತ್ರ ವಿನ್ಯಾಸವನ್ನ ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ಪ್ರತ್ಯುಷಾರ ಮೃತದೇಹ ಸ್ನಾನಗೃಹದಲ್ಲಿ ಕಂಡು ಬಂದಿದ್ದು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದು ಆತ್ಮಹತ್ಯೆ ಅಥವಾ ಅಸಹಜ ಸಾವೋ ಎಂಬುದರ ಬಗ್ಗೆ ಅಂತಿಮ ವರದಿ ನಂತರ ತಿಳಿಯಲಿದೆ ಎಂದು ಬಂಜಾರಾ ಹಿಲ್ಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಮುಂದುವರೆದು, ಆಕೆಯ ಮಲಗುವ ಕೋಣೆಯಿಂದ ಕಾರ್ಬನ್ ಮೊನಾಕ್ಸೈಡ್ ಸಿಲಿಂಡರ್ ಅನ್ನು ವಶಕ್ಕೆ ಪಡೆಯಲಾಗಿದ್ದು ಅನುಮಾನಸ್ಪದ ಸಾವಿನಡಿ ಪ್ರಕರಣವನ್ನ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕನಿಗೆ ಗಿಫ್ಟ್ ಅಂತ ವ್ಯಕ್ತಿಯೊಬ್ಬರಿಗೆ ಥಳಿಸಿದ ಪೊಲೀಸರು! ವೀಡಿಯೊ ವೈರಲ್!