Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಬಿಜೆಪಿ ವಿರುದ್ದ ಜೆಡಿಎಸ್ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

Congress protests
bangalore , ಭಾನುವಾರ, 12 ಜೂನ್ 2022 (19:47 IST)
ರಾಜ್ಯಸಭಾ ಚುನಾವಣೆ ಯಲ್ಲಿ ಜೆಡಿಎಸ್ ಶಾಸಕರು ಅಡ್ಡ ಮತದಾನ ಹೀನ್ನಲೆ ಕಾಂಗ್ರೆಸ್ ಬಿಜೆಪಿ ವಿರುದ್ದ ಜೆಡಿಎಸ್  ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ  ಕೂರಿತು ಮಾತನಾಡಿದ ಸಿಎಂ ಇಬ್ರಾಹೀಂ ಸಿದ್ದರಾಮಯ್ಯ, ಡಿ‌ಕೆಶಿ ಮೊದಲ ವೋಟ್ ಕಾಂಗ್ರೆಸ್ಸಿಗೆ ಎರಡನೇ ವೋಟ್ ಬಿಜೆಪಿಗೆ ಹಾಕಿಸಿದ್ದಾರೆ. ಇಬ್ಬರು ಧರ್ಮಪತ್ನಿ, ಒಬ್ಬರೇ ಗಂಡ ಅನ್ನೊ ಸ್ಥಿತಿ ಕಾಂಗ್ರೆಸ್ ದು ಹಾಗಾಗಿ ಸೋನಿಯಾ ಗಾಂಧಿಗೆ ವಿನಂತಿ ‌ಮಾಡುತ್ತೆನೆ. ಸ್ವತಃ ಕೆಪಿಸಿಸಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕರೇ ಬಿಜೆಪಿ ಗೆ ಎರಡನೇ ವೋಟ್ ಹಾಕಿಸಿದ್ದಾರೆ ತಕ್ಷಣವೇ ಅವರನ್ನ ವಜಾ ಮಾಡಬೇಕು. ಇನ್ನೂ  ಸಿದ್ದರಾಮಯ್ಯ ಯಡಿಯೂರಪ್ಪ ಭೇಟಿಯಾದ್ರು ಸಿ ಟಿ ರವಿ ಕಾಂಗ್ರೆಸ್ ಆಫೀಸಿಗೆ ಹೋಗಿ ಥ್ಯಾಂಕ್ಸ್ ಹೇಳಿ ಬಂದರು ಈಶ್ವರಪ್ಪನೇ ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ಗೆ ಬಿಜೆಪಿ ಗೆಲ್ಲಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.ಪಾಪ ಮನ್ಸೂರ್ ಖಾನ್ ಕರೆತಂದು ಒಂದೇ ಏಟಿಗೆ  ಜಟ್ಕಾ ಕಟ್ ಮಾಡಿ ಬಿಟ್ಟಿದ್ದಿರಿ , ನನ್ನನ್ನು ಜಟ್ಕಾ ಕಟ್ ಮಾಡಲು ನೋಡಿದ್ರಿ‌ ಆದ್ರೆ ಕುಮಾರಸ್ವಾಮಿವರ ಹತ್ರ ಕುಂತಿದ್ದೇನೆ ಎಂದು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹಿಬ್ರಾಹೀಂ ವಾಗ್ದಾಳಿ ನಡೆಸಿದರು

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು- ಮೈಸೂರು ರಸ್ತೆಗೆ 200-250 ರೂ. ಟೋಲ್ ಶುಲ್ಕ?