Publish Date: Sat, 11 Jun 2022 (09:30 IST)
Updated Date: Sat, 11 Jun 2022 (09:32 IST)
ಚೆನ್ನೈ: ಮೊನ್ನೆಯಷ್ಟೇ ಮಹಾಬಲಿಪುರಂನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ ಮತ್ತು ವಿಘ್ನೇಶ್ ಈಗ ಎಲ್ಲರ ಕೇಂದ್ರಬಿಂದುವಾಗಿದ್ದಾರೆ.
ಮದುವೆಯಾದ ಬೆನ್ನಲ್ಲೇ ಈ ತಾರಾ ಜೋಡಿ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಇಬ್ಬರೂ ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸುತ್ತಿದ್ದರು.
ಇನ್ನು, ಇವರ ಮದುವೆಗೆ ದುಬಾರಿ ಉಡುಗೊರೆಗಳು ಬಂದಿವೆ ಎನ್ನಲಾಗಿದೆ. ಅದರಲ್ಲೂ ವಿಶೇಷವಾಗಿ ನಯನತಾರಾ ತಮ್ಮ ಪತಿ ವಿಘ್ನೇಶ್ ಗೆ 20 ಕೋಟಿ ರೂ. ಬೆಲೆ ಬಾಳುವ ಬಂಗಲೆ, ವಿಘ್ನೇಶ್ ಸಹೋದರಿಗೆ ಚಿನ್ನಾಭರಣ ಉಡುಗೊರೆಯಾಗಿ ನೀಡಿದ್ದಾರಂತೆ. ಅತ್ತ ವಿಘ್ನೇಶ್ ಕೂಡಾ ನಯನತಾರಾಗೆ ಆಭರಣಗಳನ್ನು ಮತ್ತು 5 ಕೋಟಿ ರೂ. ಬೆಲೆ ಬಾಳುವ ಡೈಮಂಡ್ ರಿಂಗ್ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.