Select Your Language

Notifications

webdunia
webdunia
webdunia
webdunia

ನಯನತಾರಾ ಮದುವೆಗೆ ಬಂದ ರಜನಿಕಾಂತ್, ಶಾರುಖ್ ಖಾನ್

ನಯನತಾರಾ
ಮಹಾಬಲಿಪುರಂ , ಗುರುವಾರ, 9 ಜೂನ್ 2022 (11:42 IST)
ಮಹಾಬಲಿಪುರಂ: ಟಾಲಿವುಡ್ ಸ್ಟಾರ್ ಜೋಡಿ ನಯನತಾರಾ ಮತ್ತು ವಿಘ್ನೇಶ‍್ ಶಿವನ್ ಮದುವೆಗೆ ಸ್ಟಾರ್ ನಟರು ಆಗಮಿಸುತ್ತಿದ್ದಾರೆ.

ಇಂದು ಬೆಳಿಗ್ಗೆ ಮಹಾಬಲಿಪುರಂನಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಇದೀಗ ಗಣ್ಯಾತಿಗಣ್ಯರು ಆಗಮಿಸಿ ವಧು-ವರರಿಗೆ ಶುಭ ಕೋರುತ್ತಿದ್ದಾರೆ.

ಈಗಾಗಲೇ ಸೂಪರ್ ಸ್ಟಾರ್ ರಜನೀಕಾಂತ್, ಬಾಲಿವುಡ್ ನಟ ಶಾರುಖ್ ಖಾನ್, ನಿರ್ದೇಶಕ ಅಟ್ಲೀ, ವಿಜಯ್ ಸೇತುಪತಿ, ರಾಧಿಕಾ ಶರತ್ ಕುಮಾರ್, ಮಣಿರತ್ನಂ, ಕಾರ್ತಿ, ನೆಲ್ಸನ್ ದಿಲೀಪ್ ಕುಮಾರ್, ಉದಯನಿಧಿ ಸ್ಟಾಲಿನ್, ಶಾಲಿನಿ ಅಜಿತ್ ಆಗಮಿಸಿದ್ದಾರೆ.

ಇನ್ನು ಮದುವೆಗೆ ಉತ್ತರ ಮತ್ತು ದಕ್ಷಿಣ ಭಾರತೀಯ ಶೈಲಿಯ ಆಹಾರ ಖಾದ್ಯಗಳನ್ನು ತಯಾರಿಸಲಾಗಿದೆ. ದಕ್ಷಿಣ ಭಾರತೀಯರ ಪ್ರಿಯ ಕ್ಯಾರೆಟ್ ಹಲ್ವಾ, ಕೇರಳ, ತಮಿಳುನಾಡು, ಆಂಧ‍್ರ ಶೈಲಿಯ ಖಾದ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಯನತಾರಾ-ವಿಘ್ನೇಶ್ ಶಿವನ್ ಈಗ ಅಧಿಕೃತವಾಗಿ ಗಂಡ-ಹೆಂಡ್ತಿ