ಚೆನ್ನೈ: ವಿಕ್ರಂ ಸಿನಿಮಾ ಭರ್ಜರಿ ಹಿಟ್ ಆಗಿರುವುದರಿಂದ ಕಮಲ್ ಹಾಸನ್ ಭಾರೀ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಕರ್ನಾಟಕದಲ್ಲಿ ಸಿನಿಮಾ ಯಶಸ್ವಿಗೊಳಿಸಿದ ಕನ್ನಡಿಗರಿಗೆ ಕಮಲ್ ಹಾಸನ್ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ್ದಾರೆ.
									
			
			 
 			
 
 			
			                     
							
							
			        							
								
																	ಕಮಲ್ ಹಾಸನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಪ್ರಕಟಿಸಿದ್ದಾರೆ. ಕನ್ನಡಿಗರು ಯಾವತ್ತೂ ಒಳ್ಳೆಯ ಸಿನಿಮಾಗಳನ್ನು, ಕಲಾವಿದರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದೇ ರೀತಿ ವಿಕ್ರಂ ಸಿನಿಮಾವನ್ನು ಬೆಂಬಲಿಸಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ ಕಮಲ್.
									
										
								
																	ಈ ಮೊದಲು ವಿಕ್ರಂ ಪ್ರಚಾರಕ್ಕಾಗಿ ಕಮಲ್ ಹಾಸನ್ ಕರ್ನಾಟಕಕ್ಕೆ ಬಂದಿದ್ದರು. ಕಮಲ್ ವೃತ್ತಿ ಜೀವನ ಆರಂಭವಾಗಿದ್ದೇ ಕನ್ನಡದಲ್ಲಿ. ಹೀಗಾಗಿ ಈಗ ತಮ್ಮ ಕನ್ನಡದ ಮೇಲಿನ ಪ್ರೀತಿಯನ್ನು ಈ ರೀತಿ ತೋರಿಸಿಕೊಟ್ಟಿದ್ದಾರೆ.