Select Your Language

Notifications

webdunia
webdunia
webdunia
webdunia

ನಯನತಾರಾ-ವಿಘ್ನೇಶ್ ಶಿವನ್ ಈಗ ಅಧಿಕೃತವಾಗಿ ಗಂಡ-ಹೆಂಡ್ತಿ

ನಯನತಾರಾ-ವಿಘ್ನೇಶ್ ಶಿವನ್ ಈಗ ಅಧಿಕೃತವಾಗಿ ಗಂಡ-ಹೆಂಡ್ತಿ
ಚೆನ್ನೈ , ಗುರುವಾರ, 9 ಜೂನ್ 2022 (09:40 IST)
ಚೆನ್ನೈ: ಟಾಲಿವುಡ್ ಜೋಡಿ ನಯನತಾರಾ-ವಿಘ್ನೇಶ್ ಶಿವನ್ ಇಂದು ಬೆಳಿಗ್ಗೆ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಆರು ವರ್ಷಗಳಿಂದ ಪ್ರೇಮಿಗಳಾಗಿದ್ದ ನಯನತಾರಾ-ವಿಘ್ನೇಶ್ ಇಂದು ಬೆಳಿಗ್ಗೆ ಮಹಾಬಲಿಪುರಂನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸತಿಪತಿಗಳಾದರು. ಇಂದು ಬೆಳಿಗ್ಗೆ 8.30 ಕ್ಕೆ ವಿವಾಹ ಕಾರ್ಯಕ್ರಮ ನೆರವೇರಿದೆ.

ಈ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಪಾಲ್ಗೊಂಡಿದ್ದಾರೆ. ಮಧ್ಯಾಹ್ನದ ಬಳಿಕ ಇಬ್ಬರೂ ಫೋಟೋ ಶೇರ್ ಮಾಡಲಿದ್ದಾರೆ. ವಿವಾಹ ಮಂಟಪದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನಯನತಾರಾ-ವಿಘ‍್ನೇಶ್ ಜೋಡಿಗೆ ಶುಭ ಹಾರೈಸಲು ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್, ಸೂರ್ಯ, ಅಜಿತ್,  ವಿಜಯ್ ಸೇರಿದಂತೆ ಗಣ್ಯರು ಆಗಮಿಸುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

777 ಚಾರ್ಲಿ ಪ್ರೀಮಿಯರ್ ಶೋ ಮೂಲಕ ಹೊಸ ದಾಖಲೆ