Select Your Language

Notifications

webdunia
webdunia
webdunia
webdunia

ನಟ ಸೂರ್ಯಗೆ ಕಮಲ್ ಹಾಸನ್ ಕಡೆಯಿಂದ ದುಬಾರಿ ವಾಚ್ ಗಿಫ್ಟ್

ನಟ ಸೂರ್ಯಗೆ ಕಮಲ್ ಹಾಸನ್ ಕಡೆಯಿಂದ ದುಬಾರಿ ವಾಚ್ ಗಿಫ್ಟ್
ಚೆನ್ನೈ , ಬುಧವಾರ, 8 ಜೂನ್ 2022 (16:30 IST)
Photo Courtesy: Twitter
ಚೆನ್ನೈ: ವಿಕ್ರಂ ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ಕಮಲ್ ಹಾಸನ್ ಚಿತ್ರತಂಡದ ಪ್ರಮುಖರಿಗೆ ಗಿಫ್ಟ್ ಕೊಟ್ಟು ಖುಷಿ ಹಂಚುತ್ತಿದ್ದಾರೆ.

ಸ್ಟಾರ್ ನಟನಾಗಿದ್ದರೂ ಸೂರ್ಯ ವಿಕ್ರಂ ಸಿನಿಮಾದಲ್ಲಿ ಕೆಲವೇ ನಿಮಿಷ ಬಂದು ಹೋಗುವ ಪವರ್ ಫುಲ್ ಪಾತ್ರ ಮಾಡಿದ್ದಾರೆ. ಅವರ ಪಾತ್ರವನ್ನು ಕೊನೆಯವರೆಗೂ ಚಿತ್ರತಂಡ ಸಸ್ಪೆನ್ಸ್ ನಲ್ಲಿಟ್ಟಿತ್ತು. ಹಾಗಿದ್ದರೂ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಬಂದವರೂ ಸೂರ್ಯ ಪಾತ್ರವನ್ನು ಕೊಂಡಾಡಿದ್ದರು.

ಇದೀಗ ವಿಕ್ರಂ ಯಶಸ್ವಿಯಾದ ಬೆನ್ನಲ್ಲೇ ಕಮಲ್ ಹಾಸನ್ ಸೂರ್ಯಗೆ ದುಬಾರಿ ಬೆಲೆಯ ರೊಲೆಕ್ಸ್ ವಾಚ್ ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಮೊದಲು ಕಮಲ್ ನಿರ್ದೇಶಕ ಲೋಕೇಶ್ ಗೆ ದುಬಾರಿ ಕಾರು ಉಡುಗೊರೆ ನೀಡಿದ್ದರು. ಕಮಲ್ ಗಿಫ್ಟ್ ನೀಡಿದ ಖುಷಿಯನ್ನು ಸೂರ್ಯ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರ ಮರಿಮೊಮ್ಮಗ ಆವ್ಯನ್ ದೇವ್