Select Your Language

Notifications

webdunia
webdunia
webdunia
webdunia

ದೇವೇಗೌಡರ ಮರಿಮೊಮ್ಮಗ ಆವ್ಯನ್ ದೇವ್

ದೇವೇಗೌಡರ ಮರಿಮೊಮ್ಮಗ ಆವ್ಯನ್ ದೇವ್
ಬೆಂಗಳೂರು , ಬುಧವಾರ, 8 ಜೂನ್ 2022 (16:20 IST)
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮರಿಮೊಮ್ಮಗ, ನಿಖಿಲ್ ಕುಮಾರಸ್ವಾಮಿ ಮುದ್ದಿನ ಮಗನಿಗೆ ಇಂದು ನಾಮಕರಣ ಸಂಭ್ರಮ.

ದೊಡ್ಡ ಗೌಡ್ರ ಮನೆ ಮೊಮ್ಮಗನಿಗೆ ಆವ್ಯನ್ ದೇವ್ ಎಂದು ನಾಮಕರಣ ಮಾಡಲಾಗಿದೆ. ಇಂದು ದೇವೇಗೌಡರ ಕುಟುಂಬ ಮಗುವಿಗೆ ಅದ್ಧೂರಿಯಾಗಿ ನಾಮಕರಣ ಶಾಸ್ತ್ರ ನೆರವೇರಿಸಿದೆ.

ಈ ಸಮಾರಂಭದಲ್ಲಿ ಕೇವಲ ಕುಟುಂಬಸ್ಥರು, ಆಪ್ತರು ಮಾತ್ರ ಭಾಗಿಯಾಗಿದ್ದರು. ಬಳಿಕ ಮಾಧ‍್ಯಮಗಳ ಮುಂದೆ ನಿಖಿಲ್ ದಂಪತಿ ಆವ್ಯನ್ ಸಮೇತರಾಗಿ ಬಂದು ಸಂಭ್ರಮ ಹಂಚಿಕೊಂಡರು. ಆವ್ಯನ್ ಎಂದರೆ ಗಣೇಶ ಮತ್ತು ವಿಷ್ಣುವಿನ ಹೆಸರು. ಈ ಹೆಸರನ್ನು ನನ್ನ ಪತ್ನಿ ರೇವತಿ ಆಯ್ಕೆ ಮಾಡಿದ್ದಾಳೆ. ನನ್ನ ಮಗ ಒಳ್ಳೆ ಪ್ರಜೆಯಾಗಲಿ ಎಂಬುದು ನಮ್ಮ ಹಾರೈಕೆ ಎಂದು ನಿಖಿಲ್ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಜನಿಕಾಂತ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್ ನಟನೆ ಖಚಿತ: ಕರ್ನಾಟಕದಲ್ಲೇ ಶೂಟಿಂಗ್!