Publish Date: Wed, 08 Jun 2022 (14:16 IST)
Updated Date: Wed, 08 Jun 2022 (14:18 IST)
ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರ ತಲೈವಾರ್ 169 ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಟಿಸುವುದು ದೃಢಪಟ್ಟಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ತಲೈವಾರ್ 169 ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದ್ದು, ಭಾರೀ ಬಜೆಟ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಶಿವರಾಜ್ ಕುಮಾರ್ ಸೇರ್ಪಡೆ ಅಚ್ಚರಿ ಮೂಡಿಸಿದೆ.
ಸ್ವತಃ ಶಿವರಾಜ್ ಕುಮಾರ್ ಈ ವಿಷಯದಲ್ಲಿ ದೃಢಪಡಿಸಿದ್ದು, ಹೌದು, ನಾನು ರಜನಿ ಸಾರ್ ಅವರ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದೇನೆ. ರಜನಿ ಸಾರ್ ನನ್ನನ್ನು ಚಿಕ್ಕ ವಯಸ್ಸಿನಿಂದಲೇ ನೋಡಿಕೊಂಡು ಬಂದಿದ್ದಾರೆ. ಅವರ ಜೊತೆ ನಟಿಸುವುದು ಯಾವುದೇ ನಟನಿಗೆ ಆದರೂ ಹೆಮ್ಮೆಯ ವಿಷಯ. ಅಭಿಮಾನಿಗಳು ನಮ್ಮಿಬ್ಬರ ಕಾಂಬಿನೇಷನ್ ಇಷ್ಟಪಡುತ್ತಾರೆ. ಚಿತ್ರ ಅದ್ಭುತವಾಗಿ ಮೂಡಿ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಲೈವಾರ್ 169 ಚಿತ್ರ ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೀಕರಣ ಆಗಲಿದೆ ಎಂದು ಹೇಳಲಾಗಿದೆ. ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರದ ಸಿದ್ಧತೆ ಗಳು ಭರದಿಂದ ಸಾಗಿವೆ.