Publish Date: Mon, 13 Jun 2022 (12:45 IST)
Updated Date: Mon, 13 Jun 2022 (12:56 IST)
ಹೈದರಾಬಾದ್: ನಟಿ ಕಾಜಲ್ ಅಗರ್ವಾಲ್ ಈಗ ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮವಿತ್ತಿರುವ ನಟಿ ಈಗ ಮಗನೊಂದಿಗೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.
ಇತ್ತೀಚೆಗೆ ತಾಯಂದಿರ ದಿನದಂದು ಕಾಜಲ್ ಮೊದಲ ಬಾರಿಗೆ ಮಗನ ಫೋಟೋ ಪ್ರಕಟಿಸಿದ್ದರು. ಇದೀಗ ಮತ್ತೊಮ್ಮೆ ಮಗ ನೀಲ್ ಕಿಚ್ಲು ಜೊತೆಗಿನ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈಗಲೂ ನೀಲ್ ಮುಖ ಮಾತ್ರ ಕಾಣಿಸಿದಂತೆ ಕಾಜಲ್ ಫೋಟೋ ಪ್ರಕಟಿಸಿದ್ದು, ಲವ್ ಆಫ್ ಮೈ ಲೈಫ್ ಎಂದು ಬರೆದುಕೊಂಡಿದ್ದಾರೆ.