ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದು ಈಗ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ನಟಿ ಮೇಘಾ ಶೆಟ್ಟಿ ಬಹುಭಾಷಾ ನಟ ಮಾಧವನ್ ಜೊತೆ ಕಾಣಿಸಿಕೊಂಡಿದ್ದಾರೆ.
ಮಾಧವನ್ ಜೊತೆಗೆ ಸೆಲ್ಫಿ ತೆಗೆದುಕೊಂಡು ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಈ ಫೋಟೋ ಈಗ ವೈರಲ್ ಆಗಿದ್ದು ನೆಟ್ಟಿಗರು ಭಾರೀ ಲೈಕ್ಸ್ ಮಾಡಿದ್ದಾರೆ.
ಮೇಘಾ ಈ ಫೋಟೋ ಜೊತೆಗೆ 'ಇಂಥಾ ಅದ್ಭುತ ನಟನೆ ಜತೆಗೆ ಮಾತನಾಡುತ್ತಾ ಚೆನ್ನಾಗಿ ಸಮಯ ಕಳೆದೆ. ನಿಜವಾಗಿಯೂ ಸಾಕಷ್ಟು ಕಲಿಯುವ ಅವಕಾಶ ನನ್ನದಾಯಿತು ಎಂದು ಬರೆದುಕೊಂಡಿದ್ದಾರೆ. ಅವರ ಈ ಫೋಟೋ ನೋಡಿ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಏನು ಮೇಡಂ ಮಾಧವನ್ ಜೊತೆ ನಟಿಸಲಿದ್ದೀರಾ ಎಂದು ಕೇಳಿದ್ದಾರೆ. ಮತ್ತೆ ಕೆಲವರು ನಿಜವಾಗಿಯೂ ಅವರನ್ನು ಭೇಟಿಯಾಗಿದ್ದು ನಿಮ್ಮ ಅದೃಷ್ಟ ಎಂದಿದ್ದಾರೆ. ಯಾವ ಕಾರಣಕ್ಕೆ ಮಾಧವನ್ ಅವರನ್ನು ಭೇಟಿಯಾಗಿದ್ದು ಎಂಬ ಗುಟ್ಟನ್ನು ಅವರು ಬಿಟ್ಟು ಕೊಟ್ಟಿಲ್ಲ.
ಈ ಮೊದಲು ಮೇಘಾ ತೆಲುಗು ಸ್ಟಾರ್ ಮಹೇಶ್ ಬಾಬು ಜೊತೆ ಇದ್ದ ಫೋಟೋ ವೈರಲ್ ಆಗಿತ್ತು. ಆಗ ಅವರು ಜಾಹೀರಾತಿನಲ್ಲಿ ಜೊತೆಯಾಗಿ ನಟಿಸಿದ್ದರು. ಈಗಲೂ ಅಂತಹದ್ದೇ ಕೆಲಸದ ನಿಮಿತ್ತ ಭೇಟಿ ಆಗಿರಬಹುದು ಎನ್ನಲಾಗಿದೆ.