ಹೈದರಾಬಾದ್: ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಪುಷ್ಪ ಸಿನಿಮಾ ಖ್ಯಾತಿಯ ನಟನನ್ನು ಬಂಧಿಸಲಾಗಿದೆ.
ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾದಲ್ಲಿ ಸ್ನೇಹಿತನ ಪಾತ್ರ ಮಾಡಿದ್ದ ಜಗದೀಶ್ ಬಂಧಿತ. ಈತನ ಮೇಲೆ ಮಹಿಳೆಗೆ ಕಿರುಕುಳ ಆರೋಪ ದಾಖಲಾಗಿದೆ.
ಜಗದೀಶ ಕಿರುಕುಳದಿಂದಾಗಿ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳ ಪ್ರಕರಣ ದಾಖಲಾಗಿದೆ. ಸಹ ನಟಿಯು ಬೇರೊಬ್ಬ ಪುರುಷನ ಜೊತೆಗಿದ್ದಾಗ ಖಾಸಗಿ ಫೋಟೋಗಳನ್ನು ಜಗದೀಶ ಸೆರೆಹಿಡಿದಿದ್ದ.
ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕುತ್ತಿದ್ದ. ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಜಗದೀಶ್ ಮಾಡಿದ ಕೃತ್ಯಕ್ಕೆ ಟಾಲಿವುಡ್ ಬೆಚ್ಚಿಬಿದ್ದಿದೆ.