Photo Courtesy: Instagram
ಮುಂಬೈ: ಹೊಸ ವರ್ಷಾಚರಣೆ ಸಂಭ್ರಮ ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಇತ್ತು. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಪುತ್ರ ಸೈಫ್ ಅಲಿ ಖಾನ್ ಕೂಡಾ ನ್ಯೂ ಇಯರ್ ಪಾರ್ಟಿ ಮಾಡಿಕೊಂಡಿದ್ದಾರೆ.
ಸೈಫ್ ಪುತ್ರ ಇಬ್ರಾಹಿಂ ಬೆಳ್ಳಿ ತೆರೆಗೆ ಎಂಟ್ರಿ ಕೊಡಲಿದ್ದಾರೆ. ಇದೀಗ ನ್ಯೂ ಇಯರ್ ನಿಮಿತ್ತ ತಮ್ಮ ರೂಮರ್ಡ್ ಗರ್ಲ್ ಫ್ರೆಂಡ್ ಪಲಾಕ್ ತಿವಾರಿ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಇಬ್ಬರೂ ಇದುವರೆಗೆ ತಮ್ಮ ಸಂಬಂಧವನ್ನು ರಿವೀಲ್ ಮಾಡಿಲ್ಲ.
ಹೀಗಾಗಿ ಪಾರ್ಟಿ ಮುಗಿಸಿ ಗೆಳತಿ ಜೊತೆ ಹೊರಟಿದ್ದ ಇಬ್ರಾಹಿಂ ಕ್ಯಾಮರಾ ಮ್ಯಾನ್ ಗಳನ್ನು ನೋಡುತ್ತಿದ್ದಂತೇ ಮುಖ ಮುಚ್ಚಿಕೊಂಡು ಕಾರು ಏರಿ ಹೊರಟಿದ್ದಾರೆ.
ಇಬ್ಬರೂ ಒಂದೇ ಕಾರಿನಲ್ಲಿ ತೆರಳುವ ವಿಡಿಯೋ ಆನ್ ಲೈನ್ ನಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಇಬ್ಬರೂ ಡೇಟಿಂಗ್ ಮಾಡುತ್ತಿರುವುದು ಪಕ್ಕಾ ಎಂದು ಕಾಮೆಂಟ್ ಮಾಡಿದ್ದಾರೆ.