ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಚಿತ್ರದ ಗಳಿಕೆ ಈಗ ಮೂರು ದಿನದಲ್ಲಿ 50 ಕೋಟಿ ದಾಟಿದೆ.
									
			
			 
 			
 
 			
					
			        							
								
																	ಕೇವಲ ಕನ್ನಡ ಭಾಷೆಯಲ್ಲಿ, ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗಿ ಸಿನಿಮಾ ಇಷ್ಟರಮಟ್ಟಿಗೆ ಗಳಿಕೆ ಮಾಡುತ್ತಿರುವುದು ನಿಜಕ್ಕೂ ಸಾಧನೆಯೇ ಸರಿ. ಇದು ದರ್ಶನ್ ಗಿರುವ ಫ್ಯಾನ್ ಫಾಲೋಯಿಂಗ್ ಗೆ ಸಾಕ್ಷಿ.
									
										
								
																	ಡಿಸೆಂಬರ್ 29 ಕ್ಕೆ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನ ಸಿನಿಮಾ 19.75 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ 17.35 ಕೋಟಿ ರೂ. ಗಳಿಸಿದೆ. ಮೂರನೇ ದಿನ ಭಾನುವಾರವಾದ್ದರಿಂದ ಗಳಿಕೆಯಲ್ಲಿ ಭಾರೀ ಹೆಚ್ಚಳವಾಗಿದ್ದು 20.94 ಕೋಟಿ ರೂ. ಬಾಚಿಕೊಂಡಿದೆ.
									
											
							                     
							
							
			        							
								
																	ಈ ಮೂಲಕ ಕಾಟೇರ ಮೂರು ದಿನದಲ್ಲಿ 58 ಕೋಟಿ ರೂ. ಗಳಿಕೆ ಮಾಡಿದಂತಾಗಿದೆ. ರಾಬರ್ಟ್ ಬಳಿಕ ಒಂದಾಗಿದ್ದ ತರುಣ್ ಸುಧೀರ್-ದರ್ಶನ್ ಕಾಂಬಿನೇಷನ್ ನ ಸಿನಿಮಾ ಮತ್ತೊಮ್ಮೆ ಗೆದ್ದು ಬೀಗಿದೆ.