ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರತಂಡ ಈ ಸಿನಿಮಾವನ್ನು ವಿಶೇಷವಾಗಿ ಇತ್ತೀಚೆಗೆ ಮಡಿದ ಅರ್ಜುನನಿಗೆ ಅರ್ಪಣೆ ಮಾಡಿದೆ. 
									
			
			 
 			
 
 			
					
			        							
								
																	ಡಿ ಬಾಸ್ ದರ್ಶನ್ ಪ್ರಾಣಿ ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಚಾರವೇ. ಕಾಡಾನೆಗಳ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ಅಂಬಾರಿ ಆನೆ ಅರ್ಜುನ ಸಾವನ್ನಪ್ಪಿದಾಗ ದರ್ಶನ್ ಸೋಷಿಯಲ್ ಮೀಡಿಯಾ ಮೂಲಕ ಕಂಬನಿ ಮಿಡಿದಿದ್ದರು.
									
										
								
																	ಇದೀಗ ಕಾಟೇರ ಸಿನಿಮಾವನ್ನು ಅರ್ಜುನನಿಗೆ ಅರ್ಪಣೆ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಕಾಟೇರ ಸಿನಿಮಾ ಪ್ರದರ್ಶನವಾಗುವಾಗ ಸ್ಕ್ರೀನ್ ಮೇಲೆ ಅರ್ಜುನನ ಜೊತೆ ದರ್ಶನ್ ನಿಂತಿರುವ ಫೋಟೋ ಜೊತೆಗೆ ಈ ಸಿನಿಮಾ ನಮ್ಮನ್ನಗಲಿದ ಅರ್ಜುನನಿಗೆ ಈ ಚಿತ್ರ ಅರ್ಪಣೆ ಎಂದು ಸಂದೇಶವನ್ನೂ ಚಿತ್ರತಂಡ ಹಾಕಿಕೊಂಡಿದೆ.
									
											
							                     
							
							
			        							
								
																	ಕಾಟೇರ ಸಿನಿಮಾದ ಈ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾವನ್ನು ಯಾರೋ ಒಬ್ಬ ವ್ಯಕ್ತಿಗೆ ಅರ್ಪಿಸುವುದನ್ನು ನೋಡಿದ್ದೇವೆ. ಆದರೆ ಪ್ರಾಣಿಗೆ ಅರ್ಪಿಸುವ ಮೂಲಕ ತಮ್ಮ ಪ್ರಾಣಿ ಪ್ರೀತಿ ಎಂತಹದ್ದು ಎಂದು ದರ್ಶನ್ ತೋರಿಸಿಕೊಟ್ಟಿದ್ದಾರೆ.