Select Your Language

Notifications

webdunia
webdunia
webdunia
Wednesday, 2 April 2025
webdunia

Kaater review: ಕಾಟೇರದಲ್ಲಿ ನಟ ದರ್ಶನ್ ಬೆಸ್ಟ್ ಆಕ್ಟಿಂಗ್

ಅಂಬಾರಿ ಅರ್ಜುನ ಆನೆ
ಬೆಂಗಳೂರು , ಶುಕ್ರವಾರ, 29 ಡಿಸೆಂಬರ್ 2023 (13:36 IST)
ಬೆಂಗಳೂರು: ಬಹುನಿರೀಕ್ಷಿತ ಕಾಟೇರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಬ್ಲಾಕ್ ಬಸ್ಟರ್ ಹಿಟ್ ಎಂದು ಘೋಷಿಸಿದ್ದಾರೆ.

ಕಾಟೇರ ಸಿನಿಮಾದಲ್ಲಿ ಒಂದು ಬಂಡಾಯದ ಕತೆಯಿದೆ. ಅನ್ಯಾಯದ ವಿರುದ್ಧ ಸಿಡಿದೇಳುವ ಪಾತ್ರಗಳು ದರ್ಶನ್ ಗೆ ಹೇಳಿ ಮಾಡಿಸಿದಂತದ್ದು. ಇಂತಹ ಅನೇಕ ಪಾತ್ರಗಳನ್ನು ಅವರು ಮಾಡಿದ್ದಾರೆ. ಆದರೆ ಈ ಬಾರಿ ಅವರ ಅಭಿನಯದ ಇದುವರೆಗಿನ ಸಿನಿಮಾಗಳಲ್ಲೇ ಬೆಸ್ಟ್ ಎಂದಿದ್ದಾರೆ ಪ್ರೇಕ್ಷಕರು.

ಡಿ ಬಾಸ್ ಎಂಟ್ರಿಯೇ ಸಖತ್ ಆಗಿದೆ. ಎಂಡಿಂಗ್ ನಲ್ಲಂತೂ ದರ್ಶನ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಬೆಸ್ಟ್ ಎಂಡಿಂಗ್ ಗೇ ನಿರ್ದೇಶಕ ತರುಣ್ ಸುಧೀರ್ ಗೆ ಫುಲ್ ಮಾರ್ಕ್ಸ್ ಕೊಡಬೇಕು ಎಂದಿದ್ದಾರೆ ಪ್ರೇಕ್ಷಕರು. ಈ ಸಿನಿಮಾದಲ್ಲಿ ಕೇವಲ ಹೀರೋನ ಮೆರೆಸುವುದು ಮಾತ್ರವಲ್ಲ, ಒಂದು ಒಳ್ಳೆಯ ಕಂಟೆಂಟ್ ಕಟ್ಟಿಕೊಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.

ಹೀಗಾಗಿ ಕಾಟೇರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಪಾಸಿಟಿವ್ ಪ್ರತಿಕ್ರಿಯೆಗಳು ಸಿನಿಮಾ ಗೆಲ್ಲಿಸಲು ಸಹಕಾರಿಯಾಗುತ್ತದೆ. ಜೊತೆಗೆ ಮಾಲಾಶ್ರೀ ಪುತ್ರಿ ಆರಾಧನಾ ಚೊಕ್ಕ ಅಭಿನಯ, ಶ್ರುತಿ, ಅವಿನಾಶ್, ಕುಮಾರ್ ಗೋವಿಂದು ಮೊದಲಾದ ಹಿರಿಯ ಕಲಾವಿದರ ಅದ್ಭುತ ಅಭಿನಯ ಚಿತ್ರಕ್ಕೆ ಪ್ಲಸ್ ಪಾಯಿಂಟ್.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬಾರಿ ಹೊತ್ತ ಅರ್ಜುನನಿಗೆ ಕಾಟೇರ ಅರ್ಪಣೆ ಮಾಡಿದ ಚಿತ್ರತಂಡ