Publish Date: Tue, 22 Mar 2022 (09:17 IST)
Updated Date: Tue, 22 Mar 2022 (09:19 IST)
ಬೆಂಗಳೂರು: ತಮ್ಮದೇ ತೋಟ, ಮನೆ ಎಂದು ಮಗನ ಜೊತೆ ಜೀವನದ ಸಂಧ್ಯಾಕಾಲ ಕಳೆಯುತ್ತಿರುವ ಹಿರಿಯ ನಟಿ ಲೀಲಾವತಿ ಈಗ ತಮ್ಮ ಹಳ್ಳಿಗೆ ಉಪಕಾರವಾಗುವ ಕೆಲಸ ಮಾಡಲು ಮುಂದಾಗಿದ್ದಾರೆ.
ತಮ್ಮ ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆಯೊಂದರ ಅಗತ್ಯ ಮನಗಂಡ ಲೀಲಾವತಿ ತಮ್ಮ ಸ್ವಂತ ಜಮೀನು ಮಾರಿ 50 ಲಕ್ಷ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಭೂಮಿ ಪೂಜೆಯೂ ನೆರವೇರಿದೆ.
ಭೂಮಿ ಪೂಜೆಯಲ್ಲಿ ನೆಲಮಂಗಲ ಶಾಸಕ ಡಾ.ಕೆ. ಶ್ರೀನಿವಾಸ ಮೂರ್ತಿ ಭಾಗಿಯಾಗಿದ್ದು, ಸರ್ಕಾರದಿಂದ ನೀಡಬಹುದಾದ ಎಲ್ಲಾ ಸೌಕರ್ಯ ಒದಗಿಸಿಕೊಡುವುದಾಗಿ ಹೇಳಿದ್ದಾರೆ.