Publish Date: Tue, 22 Mar 2022 (08:40 IST)
Updated Date: Tue, 22 Mar 2022 (09:01 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಬಿಡುಗಡೆಯಾಗಿ ನಾಲ್ಕೇ ದಿನಕ್ಕೆ 100 ಕೋಟಿ ದಾಟು ಮೂಲಕ ಹೊಸ ದಾಖಲೆಯನ್ನೇ ಮಾಡಿದೆ.
ಇದುವರೆಗೆ ಕನ್ನಡ ಚಿತ್ರರಂಗದಲ್ಲಿ ಗಳಿಕೆಯಾಗದ ಹಣ ಈ ಸಿನಿಮಾ ಮಾಡಿದೆ. ಕೇವಲ ನಾಲ್ಕೇ ದಿನಗಳೊಳಗೆ 100 ಕೋಟಿ ದಾಟಿರುವ ಮೊದಲ ಕನ್ನಡ ಸಿನಿಮಾವಾಗಿದೆ.
ಮೊದಲ ದಿನ 32 ಕೋಟಿ ತಲುಪಿದ್ದ ಚಿತ್ರದ ಗಳಿಕೆ ಬಳಿಕ ಸತತವಾಗಿ 20 ಕೋಟಿ ಪ್ಲಸ್ ಗಳಿಕೆ ಮಾಡುತ್ತಾ ಬಂದಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆಯೇ ಸರಿ.