ಬೆಂಗಳೂರು: ಕೆಜಿಎಫ್ 2 ಸಿನಿಮಾದ ತೂಫಾನ್ ಎಂಬ ಎನರ್ಜೆಟಿಕ್ ಹಾಡು ಇಂದು ಬಿಡುಗಡೆಯಾಗಿದೆ.
ಬಿಡುಗಡೆಯಾದ ಎರಡೇ ಗಂಟೆಯೊಳಗೆ ಕನ್ನಡ 2 ಅವತರಣಿಕೆಯ ಹಾಡು ಮಿಲಿಯನ್ ವ್ಯೂ ದಾಟಿ ಮುನ್ನುಗ್ಗಿದೆ. ಎಲ್ಲಾ ಭಾಷೆಗಳಲ್ಲೂ ಸೇರಿ 6 ಮಿಲಿಯನ್ ಗೂ ಹೆಚ್ಚು ವ್ಯೂ ಪಡೆದಕೊಂಡಿದೆ.
ರವಿ ಬಸ್ರೂರು ಸಂಗೀತ ನಿರ್ದೇಶನದ ತೂಫಾನ್ ಹಾಡು ಬಿಡುಗಡೆ ಹಿನ್ನಲೆಯಲ್ಲಿ ಯಶ್ ಅಭಿಮಾನಿಗಳು ದೇವರಿಗೆ ಪೂಜೆ ಸಲ್ಲಿಸಿ ಬೆಳಗ್ಗಿನಿಂದ ಕಾಯುತ್ತಿದ್ದರು. ಕೊನೆಗೂ ಅವರ ನಿರೀಕ್ಷೆಗೆ ತಕ್ಕ ಭರ್ಜರಿ ಹಾಡೇ ರಿಲೀಸ್ ಆಗಿದೆ.