ಬೆಂಗಳೂರು: ಬಿಗ್ ಬಾಸ್ ಫೈನಲ್ ಇಂದೇ ನಡೆಯಬಹುದು ಎಂದು ಕಾದಿದ್ದ ಪ್ರೇಕ್ಷಕರಿಗೆ ಕಿಚ್ಚ ಸುದೀಪ್ ಮತ್ತು ಕಲರ್ಸ್ ವಾಹಿನಿ ಶಾಕ್ ಕೊಟ್ಟಿದೆ.
ಇಂದಿನಿಂದಲೇ ಬಿಗ್ ಬಾಸ್ ಫೈನಲ್ ಆರಂಭವಾಗಲಿದೆ ಎಂದು ಫ್ಯಾನ್ಸ್ ಕಾದಿದ್ದರು. ಆದರೆ ಕಿಚ್ಚ ಸುದೀಪ್ ಸಿಸಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ಸಿಸಿಎಲ್ ಕಾರಣಕ್ಕೆ ಕಿಚ್ಚ ಸುದೀಪ್ ಇಂದು ಫೈನಲ್ ಚಿತ್ರೀಕರಣ ನಡೆಸಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ನಾಳೆ ಒಂದೇ ದಿನ ಬಿಗ್ ಬಾಸ್ ಫೈನಲ್ ಎಪಿಸೋಡ್ ಪ್ರಸಾರವಾಗಲಿದೆ. ಎರಡು ದಿನ ಫೈನಲ್ ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಪ್ರತೀ ಬಾರಿ ಬಿಗ್ ಬಾಸ್ ಫೈನಲ್ ಎರಡು ದಿನ ನಡೆಯುತ್ತಿತ್ತು. ಆದರೆ ಈ ಬಾರಿ ಒಂದೇ ದಿನ ನಡೆಯಲಿದೆ.
ನಿನ್ನೆ ಕಿಚ್ಚ ಸುದೀಪ್ ವಿಶಾಖಪಟ್ಟಣಂನಲ್ಲಿ ಪಂಜಾಬ್ ವಿರುದ್ಧ ಕಿಚ್ಚ ಸಿಸಿಎಲ್ ಪಂದ್ಯವಾಡಿದ್ದರು. ಪಂದ್ಯವಾಡಿದ ತಕ್ಷಣ ಬೆಂಗಳೂರಿಗೆ ಬಂದು ಬಿಗ್ ಬಾಸ್ ನಡೆಸಿಕೊಡುವುದು ಸುಲಭವಲ್ಲ. ಹೀಗಾಗಿ ಇಂದು ವಿಶ್ರಾಂತಿ ತೆಗೆದುಕೊಂಡು ನಾಳೆ ಎಪಿಸೋಡ್ ನಡೆಸಿಕೊಡಲಿದ್ದಾರೆ.