ಬೆಂಗಳೂರು: ಕಿಚ್ಚ ಸುದೀಪ್ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ದಿನಗಳ ನಂತರ ಮತ್ತೆ ಸಿನಿಮಾ ವಿಚಾರವಾಗಿ ಟ್ರೆಂಡ್ ಆಗಿದ್ದಾರೆ. ಅವರ ಹೊಸ ಲುಕ್ ನೋಡಿ ಎಲ್ಲರೂ ಏನು ಬಾಡಿ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಮ್ಯಾಕ್ಸ್ ಸಿನಿಮಾ ಬಳಿಕ ಕಿಚ್ಚ ಈಗ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ. ಅದಕ್ಕಾಗಿ ವರ್ಕೌಟ್ ಕೂಡಾ ಶುರು ಮಾಡಿದ್ದಾರೆ. ಅವರ ಮುಂದಿನ ಸಿನಿಮಾ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಬಿಲ್ಲ ರಂಗ ಬಾಷ.
ಈ ಮಾಸ್ ಸಿನಿಮಾಗಾಗಿ ಕಿಚ್ಚ ಸಾಕಷ್ಟು ವರ್ಕೌಟ್ ಮಾಡಿ ಬಾಡಿ ಬಿಲ್ಡ್ ಮಾಡುತ್ತಿದ್ದಾರೆ. ತಮ್ಮ ಕಟ್ಟಮಸ್ತಾದ ದೇಹದ ಫೋಟೋಗಳನ್ನು ಕಿಚ್ಚ ಸುದೀಪ್ ಪ್ರಕಟಿಸಿದ್ದು, ಅಭಿಮಾನಿಗಳು ಲುಕ್ ನೋಡಿಯೇ ಥ್ರಿಲ್ ಆಗಿದ್ದಾರೆ.
ಕಿಚ್ಚನ ಪರಿಶ್ರಮ ನೋಡುತ್ತಿದ್ದರೆ ಅವರ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ. ಸದ್ಯದಲ್ಲೇ ಬಿಲ್ಲ ರಂಗ ಬಾಷಾ ಸಿನಿಮಾ ಸೆಟ್ಟೇರಲಿದೆ ಎಂಬ ಸೂಚನೆಯನ್ನೂ ಈ ಫೋಟೋಗಳು ನೀಡಿವೆ.