ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಅಪ್ ಡೇಟ್ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಖುಷಿ ಸುದ್ದಿ ಕೊಟ್ಟಿದ್ದಾರೆ.
ವಿಕ್ರಾಂತ್ ರೋಣ ಜುಲೈನಲ್ಲಿ ರಿಲೀಸ್ ಆಗುವುದೆಂದು ಈಗಾಗಲೇ ಚಿತ್ರತಂಡ ಘೋಷಿಸಿತ್ತು. ಈ ಸಂಬಂಧ ಟೀಸರ್ ಕೂಡಾ ಬಿಡುಗಡೆ ಮಾಡಿತ್ತು.
ಆದರೆ ಅದಾದ ಬಳಿಕ ಯಾವುದೇ ಅಪ್ ಡೇಟ್ ಸಿಗುತ್ತಿಲ್ಲ ಎಂದು ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಸುದೀಪ್ ಭರವಸೆ ನೀಡಿದ್ದಾರೆ. ನಾವು ಕೊಟ್ಟ ಮಾತು ಮರೆತಿಲ್ಲ. ಅದಕ್ಕೆ ಬೇಕಾದ ಸಿದ್ಧತೆ ನಡೆಸುತ್ತಿದ್ದೇವೆ. ಸದ್ಯದಲ್ಲೇ ನಿಮಗೆ ಹೊಸ ಪ್ರಕಟಣೆ ನೀಡುತ್ತೇವೆ ಎಂದು ಸುದೀಪ್ ಹೇಳಿದ್ದಾರೆ.