Publish Date: Sun, 01 May 2022 (19:08 IST)
Updated Date: Sun, 01 May 2022 (19:10 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ತಮ್ಮ ಪುತ್ರಿಯ ನಿರ್ಮಾಣದಲ್ಲಿ ವೆಬ್ ಸರಣಿಯೊಂದರಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ವೆಬ್ ಸರಣಿಗಳು ಜನಪ್ರಿಯವಾಗುತ್ತಿದೆ. ಶಿವಣ್ಣ ಪುತ್ರಿ ನಿವೇದಿತಾ ಈಗಾಗಲೇ ಎರಡು ವೆಬ್ ಸೀರೀಸ್ ಗಳನ್ನು ನಿರ್ಮಿಸಿದ್ದಾರೆ.
ಇದೀಗ ತಮ್ಮ ಮಗಳ ನಿರ್ಮಾಣದ ವೆಬ್ ಸರಣಿಯಲ್ಲಿ ತಾವೇ ನಟಿಸಲು ಆಸಕ್ತಿ ಹೊಂದಿರುವುದಾಗಿ ಶಿವಣ್ಣ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಟಾಕೀಸ್ ಒಟಿಟಿ ಎಂಬ ಕನ್ನಡದ ಒಟಿಟಿ ಆಪ್ ಬಿಡುಗಡೆ ಸಮಾರಂಭದಲ್ಲಿ ಅವರು ಈ ಮಾತನ್ನಾಡಿದ್ದಾರೆ.