ಬೆಂಗಳೂರು: ಕಿಚ್ಚ ಸುದೀಪ್ ಮೊನ್ನೆಯಷ್ಟೇ ಬಡ ಹುಡುಗಿಯೊಬ್ಬಳ ಶಿಕ್ಷಣಕ್ಕೆ ನೆರವಾಗಿ ಸುದ್ದಿಯಾಗಿದ್ದರು. ಇದೀಗ ಕಿಡ್ನಿ ವೈಫಲ್ಯಕ್ಕೊಳಗಾದ ಅಭಿಮಾನಿಗೆ ನೆರವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
26 ವರ್ಷದ ಯುವಕನೊಬ್ಬ ಎರಡೂ ಕಿಡ್ನಿ ವೈಫಲ್ಯಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಈತಹ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಲು ಕಿಚ್ಚ ಮುಂದಾಗಿದ್ದಾರೆ. ತಮ್ಮ ಅಭಿಮಾನಿ ಬಳಗದ ಮೂಲಕ ಅಭಿಮಾನಿಯ ಸಹಾಯಕ್ಕೆ ಕಿಚ್ಚ ಧಾವಿಸಿದ್ದಾರೆ. ಕಿಚ್ಚನ ಈ ಹೃದಯವಂತಿಕೆ ನೋಡಿ ಅಭಿಮಾನಿಗಳು ಕೊಂಡಾಡಿದ್ದಾರೆ.