ಬೆಂಗಳೂರು: ಕಿರುತೆರೆ ನಟಿ ನೇಹಾ ಗೌಡ ತಮ್ಮ ಬಗ್ಗೆ ಬಂದ ಸುಳ್ಳು ಸುದ್ದಿಯೊಂದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಬೊಂಬೆ ಅಲಿಯಾಸ್ ನೇಹಾ ಗೌಡ ಪ್ರಸ್ತುತ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿದ್ದಾರೆ. ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದೆಲ್ಲಾ ಆನ್ ಲೈನ್ ಮೀಡಿಯಾವೊಂದು ಸುಳ್ಳು ಸುದ್ದಿ ಪ್ರಕಟಿಸಿತ್ತು.
ಇದರ ಬಗ್ಗೆ ನೇಹಾ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಸುಳ್ಳು ಸುದ್ದಿ ಪ್ರಕಟಿಸುವ ಮೊದಲು ನಿಮ್ಮ ಮನೆಯಲ್ಲಿರುವ ಅಕ್ಕ, ತಂಗಿ ಅಥವಾ ನಿಮ್ಮ ಅಮ್ಮಂದಿರ ಬಗ್ಗೆ ಯೋಚಿಸಿ. ಅಥವಾ ನಿಮ್ಮ ಬಗ್ಗೆ ಯೋಚಿಸಿ. ನಿಮ್ಮ ಬಗ್ಗೆ ಯಾರಾದರೂ ಹೀಗೆ ಸುಳ್ಳು ಬರೆದರೆ ಹೇಗಿರುತ್ತದೆ ಎಂದು ಯೋಚಿಸಿ. ಇಂತಹ ಸುದ್ದಿಗಳು ನಮಗೆ ಹತಾಶೆ, ಆಕ್ರೋಶ ಹುಟ್ಟಿಸುತ್ತದೆ. ಯಾಕೆ ಇಂತಹ ಸುಳ್ಳುಗಳನ್ನು ಬರೆಯುತ್ತೀರೋ ಅದು ಹೇಗೆ ಮನಸ್ಸು ಬರುತ್ತದೋ ಎಂದು ನೇಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.