ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಅಭಿನಯದ ಮದಗಜ ಸಿನಿಮದಲ್ಲಿ ಪರಭಾಷಾ ತಾರೆಯರು ವಿಲನ್ ಪಾತ್ರ ಮಾಡುವ ನಿರೀಕ್ಷೆಯಿದೆ.
									
										
								
																	
ಮೂಲಗಳ ಪ್ರಕಾರ ಮದಗಜ ಚಿತ್ರದಲ್ಲಿ ತಮಿಳಿನ ವಿಜಯ್ ಸೇತುಪತಿ ಅಥವಾ ತೆಲುಗಿನ ಜಗಪತಿ ಬಾಬು ಖಳ ನಾಯಕರಾಗಿ ಅಭಿನಯಿಸುವ ಸಾಧ‍್ಯತೆಯಿದೆ ಎನ್ನಲಾಗಿದೆ. ಈ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
									
			
			 
 			
 
 			
			                     
							
							
			        							
								
																	ಜುಲೈ 13 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಕೆಜಿಎಫ್ ಸಿನಿಮಾ ಖ್ಯಾತಿಯ ಚಂದ್ರಮೌಳಿ ಮತ್ತು ಶಂಕರ್ ಡೈಲಾಗ್ ಬರೆದಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ.