Publish Date: Sun, 21 Jun 2020 (09:00 IST)
Updated Date: Sun, 21 Jun 2020 (09:01 IST)
ಬೆಂಗಳೂರು: ‘ಬೆಲ್ ಬಾಟಂ’ ಸಿನಿಮಾ ಬಳಿಕ ನಿರ್ದೇಶಕ ರಿಷಬ್ ಶೆಟ್ಟಿ ನಾಯಕ ನಟನಾಗಿಯೂ ಸೈ ಎನಿಸಿಕೊಂಡಿದ್ದರು. ಅವರ ಹೊಸ ಸಿನಿಮಾ ಇದೀಗ ಸೆಟ್ಟೇರಿದ್ದು, ಹರಿಕಥೆ ಅಲ್ಲ ಗಿರಿಕಥೆ ಎಂಬ ವಿಶಿಷ್ಟ ಟೈಟಲ್ ಇಡಲಾಗಿದೆ.
ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ರಿಷಬ್ ಶೆಟ್ಟಿ ಫಿಲಂಸ್ ಸಹಭಾಗಿತ್ವದಲ್ಲಿ ನಿರ್ಮಿಸುತ್ತಿರುವ ಸಿನಿಮಾ ಇದಾಗಿದೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದ್ದ ಗಿರಿಕೃಷ್ಣ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಅನಜೀಶ್ ಲೋಕನಾಥ್ ಸಂಗೀತ ಸಂಯೋಜಿಸಲಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ.