Publish Date: Fri, 19 Jun 2020 (10:48 IST)
Updated Date: Fri, 19 Jun 2020 (10:51 IST)
ಬೆಂಗಳೂರು: ಲಾಕ್ ಡೌನ್ ಮುಗಿದು ಹೆಚ್ಚು ಕಡಿಮೆ ಎಲ್ಲವೂ ತೆರೆದರೂ ಚಿತ್ರಮಂದಿರಗಳು ಮಾತ್ರ ಇನ್ನೂ ತೆರೆಯಲು ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ.
ಹೀಗಾಗಿ ಸಿನಿಮಾ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಆದರೆ ಸದ್ಯಕ್ಕೆ ಸಿನಿಮಾ ಥಿಯೇಟರ್ ತೆರೆಯಲ್ಲ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಸಿನಿಮಾ ಮಂದಿರ, ಕಲ್ಯಾಣ ಮಂಟಪ ತೆರೆಯಲು ಇನ್ನೂ ಎರಡು ತಿಂಗಳು ಕಾಯಬೇಕಾಗುತ್ತದೆ. ಸಿನಿಮಾ ರಂಗಕ್ಕೆ ಆರ್ಥಿಕ ಹೊಡೆತ ಬೀಳಬಾರದು ಎಂಬ ಕಾರಣಕ್ಕೆ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಆದರೆ ಕೇಂದ್ರದ ಸೂಚನೆ ಬರದ ಹೊರತು ಸಿನಿಮಾ ಮಂದಿರ ತೆರೆಯಲು ಅವಕಾಶ ನೀಡಲಾಗದು ಎಂದು ಅವರು ಹೇಳಿದ್ದಾರೆ.