Publish Date: Fri, 19 Jun 2020 (09:31 IST)
Updated Date: Fri, 19 Jun 2020 (09:33 IST)
ಬೆಂಗಳೂರು: ಗಡಿಯಲ್ಲಿ ಸಂಘರ್ಷದ ಬಳಿಕ ಚೀನಾ ವಿರುದ್ಧದ ಆಕ್ರೋಶ ದೇಶದಲ್ಲಿ ಇನ್ನೂ ಹೆಚ್ಚಾಗಿದ್ದು, ನೆಟ್ಟಿಗರು ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕರೆಕೊಡುತ್ತಿದ್ದಾರೆ. ಈ ನಡುವೆ ನವರಸನಾಯಕ ಜಗ್ಗೇಶ್ ಅಭಿಮಾನಿಯೊಬ್ಬರು ಟಿಕ್ ಟಾಕ್ ಬಳಸಲ್ವಾ ಎಂದು ಪ್ರಶ್ನಿಸಿದ್ದಕ್ಕೆ ಖಡಕ್ ಆಗಿ ಉತ್ತರಿಸಿದ್ದಾರೆ.
ಎಲ್ಲಾ ನಟರೂ ಟಿಕ್ ಟಾಕ್ ಆಪ್ ಬಳಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಾರೆ. ಸರ್, ನೀವು ಯಾಕೆ ಮಾಡಲ್ಲ ಎಂದು ಅಭಿಮಾನಿಯೊಬ್ಬರು ಜಗ್ಗೇಶ್ ಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ‘ತಮ್ಮ ಪ್ರತಿಭೆ ಸಾಬೀತುಪಡಿಸಬೇಕಿರುವ ಯುವ ನಟ-ನಟಿಯರಿಗೆ ಇಂತಹ ವೇದಿಕೆ ಬೇಕು. ಚಿತ್ರರಂಗದಲ್ಲಿ 40 ವರ್ಷ ಅನುಭವವಿರುವ ನನಗೆ ಇದು ಬೇಕಾಗಿಲ್ಲ. ನಾನು ಏನೇಮಾಡಿದರೂ ಅದನ್ನು ವಿಡಿಯೋ ಮಾಡಿ ಎಡಿಟ್ ಮಾಡಿ ಬೇಕಾದ ಹಾಡು ಹಿನ್ನಲೆಯ ಸಂಗೀತ ಮಾಡುವ ಯೋಗಿ ಗೌಡ ಮಾಡುತ್ತಾನೆ. ಚೈನ ವಸ್ತು ನನ್ನ ಮನೆ ಹೊಸ್ತಿಲಿನ ಮುಂದೆಯೂ ಸುಳಿಯಲ್ಲ. ನಾನು ಸ್ವಾಭಿಮಾನಿ ಭಾರತೀಯ’ ಎಂದು ಜಗ್ಗೇಶ್ ಖಡಕ್ ಆಗಿ ಹೇಳಿದ್ದಾರೆ.