Select Your Language

Notifications

webdunia
webdunia
webdunia
webdunia

ಹೊರಾಂಗಣ ಚಿತ್ರೀಕರಣಕ್ಕೂ ಸರ್ಕಾರದ ಅನುಮತಿ

ಹೊರಾಂಗಣ ಚಿತ್ರೀಕರಣಕ್ಕೂ ಸರ್ಕಾರದ ಅನುಮತಿ
ಬೆಂಗಳೂರು , ಮಂಗಳವಾರ, 16 ಜೂನ್ 2020 (09:56 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾ, ಧಾರವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ಸಂಪೂರ್ಣ ಅನುಮತಿ ನೀಡಿದೆ. ಹೀಗಾಗಿ ಇನ್ನು ಮುಂದೆ ಹೊರಾಂಗಣ ಚಿತ್ರೀಕರಣವೂ ನಡೆಯಲಿದೆ.


ಕೊರೋನಾ ಭೀತಿ ಹಿನ್ನಲೆಯಲ್ಲಿ ಚಿತ್ರೀಕರಣ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿತ್ತು. ಅದಾದ ಬಳಿಕ ಕಳೆದ ತಿಂಗಳು ಧಾರವಾಹಿಗಳ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು.

ಇದೀಗ ಸಿನಿಮಾವೂ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣಕ್ಕೂ ಷರತ್ತು ಬದ್ಧ ಒಪ್ಪಿಗೆ ನೀಡಲಾಗಿದೆ. ಚಿತ್ರೀಕರಣದ ವೇಳೆ ಸುರಕ್ಷತಾ ಕ್ರಮ, ಸಾಮಾಜಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಲಿದೆ. ಆದರೆ ಎಲ್ಲಾ ರೀತಿಯ ಚಿತ್ರೀಕರಣ ಚಟುವಟಿಕೆಗಳಿಗೆ ಅವಕಾಶ ನೀಡಿರುವುದರಿಂದ ಕೆಲಸವಿಲ್ಲದೇ ಕೂತಿದ್ದ ಎಷ್ಟೋ ಕಾರ್ಮಿಕರು, ಕಲಾವಿದರಿಗೆ ಅವಕಾಶ ಸಿಕ್ಕಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2020 ರ ಕರಾಳತೆಗೆ ಇದುವೇ ಸಾಕ್ಷಿ: ಐದು ತಿಂಗಳಲ್ಲಿ ಜೀವ ಕಳೆದುಕೊಂಡ ಕಲಾವಿದರು ಎಷ್ಟು ಮಂದಿ ಗೊತ್ತಾ?!