Publish Date: Sat, 20 Jun 2020 (10:35 IST)
Updated Date: Sat, 20 Jun 2020 (10:36 IST)
ಬೆಂಗಳೂರು: ಹಾಸ್ಯ ನಟನಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿ, ನಾಯಕ ನಟನಾಗಿ ಮಿಂಚುತ್ತಿರುವ ಪ್ರತಿಭಾವಂತ ನಟ ನೀನಾಸಂ ಸತೀಶ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನ ಅವರ ಅಭಿಮಾನಿಗಳಿಗೆ ಮೂರು ಚಿತ್ರ ತಂಡಗಳು ಸಿಹಿ ಸುದ್ದಿ ಕೊಟ್ಟಿವೆ.
ನೀನಾಸಂ ಸತೀಶ್ ನಾಯಕರಾಗಿರುವ ಮೂರು ಸಿನಿಮಾಗಳ ಪೋಸ್ಟರ್, ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ‘ಗೋದ್ರಾ’, ‘ದಸರಾ’ ಮತ್ತು ಇನ್ನೂ ಹೆಸರಿಡದ ಹೊಸ ಸಿನಿಮಾವೊಂದರ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಶರ್ಮಿಳಾ ಮಾಂಡ್ರೆ ಅರ್ಪಿಸುವ ದಸರಾ ಸಿನಿಮಾ ಅರವಿಂದ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿದ್ದರೆ ಗೋದ್ರಾ ಕೆ ಎಸ್ ನಂದೀಶ್ ಅವರ ನಿರ್ದೇಶನದ ಸಿನಿಮಾ. ಗೋದ್ರಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ. ಇನ್ನೊಂದು ಹೆಸರಿಡದ ಸಿನಿಮಾಗೆ ಸತೀಶ್ ನಾಯಕರಾಗಿದ್ದು, ಶ್ರೀ ಸಾಯಿ ಪ್ರೊಡಕ್ಷನ್ಸ್ ನಿರ್ಮಾಣ ಮೊದಲ ಸಿನಿಮಾ ಇದಾಗಿದೆ. ಸದ್ಯದಲ್ಲೇ ಇದರ ಶೂಟಿಂಗ್ ಆರಂಭವಾಗಲಿದೆ.