Publish Date: Mon, 22 Jun 2020 (09:58 IST)
Updated Date: Mon, 22 Jun 2020 (10:01 IST)
ಬೆಂಗಳೂರು: ಆಂಕರ್ ಅನುಶ್ರೀ ಎಂದರೆ ಮಾತಿನ ಮಲ್ಲಿ ಎಂದು ಎಲ್ಲರಿಗೂ ಗೊತ್ತು. ಅವರು ಸ್ಟೇಜ್ ಮೇಲೆ ಎಲ್ಲರ ಕಾಲೆಳೆಯುತ್ತಾ ನಿರೂಪಣೆ ಮಾಡುವ ಶೈಲಿ ಎಲ್ಲರಿಗೂ ಇಷ್ಟ.
ಆದರೆ ಲಾಕ್ ಡೌನ್ ನಿಂದಾಗಿ ಈ ಮಾತಿನ ಮಲ್ಲಿಯ ಮಾತಿಗೆ ಬ್ರೇಕ್ ಬಿದ್ದಿತ್ತು. ಜೀ ಕನ್ನಡದ ಪ್ರಮುಖ ಆಂಕರ್ ಆಗಿರುವ ಅನುಶ್ರೀಗೆ ಈಗ ಖುಷಿಯ ಸುದ್ದಿ ಸಿಕ್ಕಿದೆಯಂತೆ.
ಧಾರವಾಹಿಗಳ ಚಿತ್ರೀಕರಣ ಆರಂಭವಾದರೂ ರಿಯಾಲಿಟಿ ಶೋ ಆರಂಭವಾಗಿರದ ಕಾರಣ ಅನುಶ್ರೀ ಮನೆಯಲ್ಲೇ ಇರಬೇಕಾಯ್ತು. ಆದರೆ ಈಗ ಸದ್ಯದಲ್ಲೇ ಸರಿಗಮಪ ಶೋ ಮತ್ತೆ ಆರಂಭವಾಗಲಿದ್ದು, ಮತ್ತೆ ಕೆಲಸಕ್ಕೆ ಹಾಜರಾಗುತ್ತಿರುವುದು ಖುಷಿಯಾಗಿದೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ. ಅಂತೂ ಸದ್ಯದಲ್ಲೇ ಅನುಶ್ರೀ ಹೊಸ ಎಪಿಸೋಡ್ ಗಳೊಂದಿಗೆ ನಿಮ್ಮ ಮುಂದೆ ಬರಲಿದ್ದಾರೆ.