ಮುಂಬೈ: ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಬಾಲಿವುಡ್ ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಬಾಲಿವುಡ್ ನ ಘಟಾನುಘಟಿಗಳ ವಿರುದ್ಧ ಕಿಡಿ ಕಾರುತ್ತಲೇ ಇದ್ದಾರೆ.
ಸಲ್ಮಾನ್ ಖಾನ್, ಕರಣ್ ಜೋಹರ್ ಅವರಂತಹ ಘಟಾನುಘಟಿಗಳ ಅವಗಣನೆಯಿಂದಲೇ ಸುಶಾಂತ್ ರ ಪ್ರತಿಭಾವಂತ ನಟರು ಮಾನಸಿಕವಾಗಿ ಖಿನ್ನರಾಗಲು ಕಾರಣ ಎಂದು ಸುಶಾಂತ್ ಅಭಿಮಾನಿಗಳು ಟ್ವಿಟರ್ ನಲ್ಲಿ ಕಿಡಿ ಕಾರಿದ್ದರು.
ಇದರ ಬಗ್ಗೆ ಇದೀಗ ಸಲ್ಮಾನ್ ಪ್ರತಿಕ್ರಿಯಿಸಿದ್ದು ತಮ್ಮ ಅಭಿಮಾನಿಗಳಲ್ಲಿ ಸುಶಾಂತ್ ಅಭಿಮಾನಿಗಳ ಮೇಲೆ ಕೆಟ್ಟದಾಗಿ ಕಾಮೆಂಟ್ ಮಾಡದಂತೆ ಮನವಿ ಮಾಡಿದ್ದಾರೆ. ಸುಶಾಂತ್ ಅಭಿಮಾನಿಗಳು ಅವರು ತೀರಿಕೊಂಡ ಬೇಸರದಲ್ಲಿ ಈ ರೀತಿ ಮಾತನಾಡುತ್ತಿದ್ದಾರಷ್ಟೇ. ಅದಕ್ಕೆ ಕೆಟ್ಟದಾಗಿ ಪ್ರತಿಕ್ರಿಯಿಸಿ ಮತ್ತಷ್ಟು ನೋವು ಕೊಡಬೇಡಿ ಎಂದು ಸಲ್ಮಾನ್ ಮನವಿ ಮಾಡಿದ್ದಾರೆ.