Select Your Language

Notifications

webdunia
webdunia
webdunia
webdunia

ಸುಶಾಂತ್ ಆತ್ಮಹತ್ಯೆ ಪ್ರಕರಣ: ಸಲ್ಮಾನ್ ಖಾನ್, ಕರಣ್ ಜೋಹರ್ ವಿರುದ್ಧ ಪ್ರಕರಣ ದಾಖಲು

ಸುಶಾಂತ್ ಆತ್ಮಹತ್ಯೆ ಪ್ರಕರಣ: ಸಲ್ಮಾನ್ ಖಾನ್, ಕರಣ್ ಜೋಹರ್ ವಿರುದ್ಧ ಪ್ರಕರಣ ದಾಖಲು
ಮುಂಬೈ , ಗುರುವಾರ, 18 ಜೂನ್ 2020 (09:23 IST)
ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಕಾರಣ ಎಂಬ ಆರೋಪದ ಬೆನ್ನಲ್ಲೇ ಘಟಾನುಘಟಿ ಸ್ಟಾರ್ ಗಳ ವಿರುದ್ಧ ಬಿಹಾರದಲ್ಲಿ ಪ್ರಕರಣವೊಂದು ದಾಖಲಾಗಿದೆ.

 
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಬಾಲಿವುಡ್ ನಲ್ಲಿ ಹೊರಗಿನಿಂದ ಬಂದವರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿ ಬಿಹಾರದ ಮುಝಾಫರ್ ಪುರ್ ನಲ್ಲಿ ಸಲ್ಮಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ಏಕ್ತಾ ಕಪೂರ್ ಸೇರಿದಂತೆ ಎಂಟು ಘಟಾನುಘಟಿ ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಸುಧೀರ್ ಕುಮಾರ್ ಓಝಾ ಎಂಬ ವಕೀಲರು ದೂರು ಸಲ್ಲಿಸಿದ್ದಾರೆ.

ಇವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಶಾಂತ್ ರನ್ನು ಏಳು ಸಿನಿಮಾಗಳಿಂದ ಕೈ ಬಿಡಲೂ ಈ ಕಾಲೆಳೆಯುವ ಮಂದಿಯೇ ಕಾರಣ ಎಂದು ಸುಧೀರ್ ಕುಮಾರ್ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಯಾ ಖಾನ್ ಸಾವಿನ ಪ್ರಕರಣದಲ್ಲಿ ಸೂರಜ್ ಪಾಂಚೋಲಿಯನ್ನು ಸಲ್ಮಾನ್ ಖಾನ್ ರಕ್ಷಿಸಿದ್ದರಂತೆ!