Publish Date: Tue, 23 Jun 2020 (09:53 IST)
Updated Date: Tue, 23 Jun 2020 (09:54 IST)
ಬೆಂಗಳೂರು: ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಲಾಕ್ ಡೌನ್ ಬಳಿಕ ಮತ್ತೆ ತಮ್ಮ ಹಳೆಯ ಕಾಯಕಕ್ಕೆ ಮರಳುತ್ತಿದ್ದಾರೆ. ಸಿನಿಮಾಗಳಲ್ಲಿ ಅವಕಾಶವಿದ್ದರೂ ಶೈನ್ ತಮ್ಮ ಹಳೆಯ ವೃತ್ತಿಯನ್ನು ಮರೆತಿಲ್ಲ.
ಶೈನ್ ಬಿಗ್ ಬಾಸ್ ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಗಲ್ಲಿ ಕಿಚನ್ ನಡೆಸುತ್ತಿದ್ದರು. ಬಿಗ್ ಬಾಸ್ ವಿಜೇತರಾದ ಮೇಲೂ ತಮ್ಮ ಫುಡ್ ಟ್ರಕ್ ನಲ್ಲಿ ಕ್ಯಾಂಟೀನ್ ನಡೆಸುವುದನ್ನು ಮಾತ್ರ ಬಿಟ್ಟಿರಲಿಲ್ಲ.
ಆದರೆ ಲಾಕ್ ಡೌನ್ ವೇಳೆ ಅನಿವಾರ್ಯವಾಗಿ ಈ ಕಾಯಕವನ್ನು ಸ್ಥಗಿತಗೊಳಿಸಬೇಕಾಯಿತು. ಇದೀಗ ಹೊಸ ವಾಹನದೊಂದಿಗೆ ತಮ್ಮ ಗಲ್ಲಿ ಕಿಚನ್ ನನ್ನು ಹೊಸ ರೀತಿಯಲ್ಲಿ ಆರಂಭಿಸಲು ಶೈನ್ ಸಿದ್ಧತೆ ನಡೆಸಿದ್ದಾರೆ. ಸದ್ಯದಲ್ಲೇ ಗಲ್ಲಿ ಕಿಚನ್ ಆರಂಭಿಸುವುದಾಗಿ ಶೈನ್ ಹೇಳಿಕೊಂಡಿದ್ದಾರೆ.