Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಫೋಟೋ ಲೀಕ್ ಮಾಡಿದಿರೋ ಜೋಕೆ!

ಕೆಜಿಎಫ್ 2 ಫೋಟೋ ಲೀಕ್ ಮಾಡಿದಿರೋ ಜೋಕೆ!
ಬೆಂಗಳೂರು , ಸೋಮವಾರ, 3 ಫೆಬ್ರವರಿ 2020 (09:51 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಎರಡನೇ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹೆಚ್ಚು ಕಡಿಮೆ ಕೊನೆಯ ಹಂತದಲ್ಲಿದೆ.


ಆದರೆ ಈ ಸಿನಿಮಾ ಶೂಟಿಂಗ್ ನೋಡಲು ಬರುವ ಅಭಿಮಾನಿಗಳು ವಿಡಿಯೋ, ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ. ಇದರಿಂದಾಗಿ ಯಶ್ ಲುಕ್, ಸಿನಿಮಾ ಸೆಟ್ ಎಲ್ಲವೂ ಬಹಿರಂಗವಾಗುತ್ತಿದೆ.

ಹೀಗಾಗಿ ಕೆಜಿಎಫ್ ತಂಡ ಹೊಸ ಐಡಿಯಾ ಮಾಡಿದೆ. ಆಂಟಿ ಪೈರಸಿ ತಂಡದ ಮೂಲಕ ಫೋಟೋ ಲೀಕ್ ಮಾಡುವವರ ಮೇಲೆ ನಿಗಾ ಇಟ್ಟಿದ್ದು, ಆ ರೀತಿ ಫೋಟೋ ಲೀಕ್ ಮಾಡುವ ಸಾಮಾಜಿಕ ಜಾಲತಾಣ ಖಾತೆದಾರರ ಖಾತೆಯನ್ನು ರದ್ದು ಮಾಡಲು ಕ್ರಮ ಕೈಗೊಳ್ಳುತ್ತಿದೆಯಂತೆ. ಹೀಗಾಗಿ ಕೆಜಿಎಫ್ 2 ಎಕ್ಸ್ ಕ್ಲೂಸಿವ್ ಫೋಟೋ, ವಿಡಿಯೋ ಸಿಕ್ಕಿತೆಂದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವ ಮೊದಲು ಯೋಚಿಸುವುದು ಒಳ್ಳೆಯದು.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಆಯ್ತು, ಇದೀಗ ಧಾರವಾಹಿ ಡಬ್ಬಿಂಗ್ ಯುಗ ಶುರು