ಬೆಂಗಳೂರು: ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಏಕ್ ಲವ್ ಯಾ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಪ್ರೀತಿ, ಪ್ರೇಮ ಕತೆಯನ್ನು ಯುವ ಜನಾಂಗಕ್ಕೆ ಮುಟ್ಟುವ ಹಾಗೆ ಮಾಡುವುದರಲ್ಲಿ ಪ್ರೇಮ್ ರದ್ದು ಎತ್ತಿದ ಕೈ.
ಇದೀಗ ಪ್ರೇಮ್ ಏಕ್ ಲವ್ ಯಾ ಕೂಡಾ ಪ್ರೇಮಕತೆ ಹೊಂದಿದ್ದು, ಈ ಸಿನಿಮಾದ ಟೀಸರ್ ನ್ನು ಫೆಬ್ರವರಿ 14 ಕ್ಕೆ ಬಿಡುಗಡೆ ಮಾಡಿ ಪ್ರೇಮಿಗಳ ದಿನಕ್ಕೆ ಗಿಫ್ಟ್ ನೀಡಲು ತೀರ್ಮಾನಿಸಿದ್ದಾರೆ.
ರಕ್ಷಿತಾ ಪ್ರೇಮ್ ಸಹೋದರ ರಾಣಾ ಅಭಿನಯದ ಚೊಚ್ಚಲ ಸಿನಿಮಾ ಇದಾಗಿದ್ದು, ಈಗಾಗಲೇ ಈ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜಾರಿಯಲ್ಲಿದ್ದು, ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.