Publish Date: Thu, 30 Jan 2020 (09:28 IST)
Updated Date: Thu, 30 Jan 2020 (09:29 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ತಮ್ಮ ಮೆಚ್ಚಿನ ವನ ಸಂಚಾರಕ್ಕೆ ಹೊರಟಿರುವುದು ಎಲ್ಲರಿಗೂ ಗೊತ್ತೇ ಇದೆ. ದರ್ಶನ್ ಉತ್ತರಾಖಂಡದ ಕಾನನದಲ್ಲಿ ಕ್ಯಾಮರಾ ಹಿಡಿದು ಫೋಟೋಗ್ರಫಿ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಸ್ನೇಹಿತರ ಗುಂಪಿನೊಂದಿಗೆ ವನಸಂಚಾರ ಮಾಡಿರುವ ಡಿ ಬಾಸ್ ಪಕ್ಷಿಗಳ ಚಲನವಲನಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಸಾಮಾನ್ಯರಂತೇ ಬ್ಯಾಗ್, ಕ್ಯಾಮರಾ ಹಿಡಿದುಕೊಂಡು ರೈಲ್ವೇ ಸಂಚಾರ ಮಾಡುತ್ತಾ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ.
ಈ ನಡುವೆ ತಮ್ಮನ್ನು ಗುರುತಿಸಿದ ಅಭಿಮಾನಿಗಳ ಜತೆ ಸೆಲ್ಫೀ ತೆಗೆಸಿಕೊಂಡು ಖುಷಿಪಡಿಸಿದ್ದಾರೆ. ಈ ಬಿಡುವಿನ ಬಳಿಕ ದರ್ಶನ್ ತಮ್ಮ ಮದಕರಿನಾಯಕ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಲಿದ್ದಾರೆ.