Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಪುನೀತ್ ಜೀವನಗಾಥೆಯನ್ನು ಸಿನಿಮಾ ಮಾಡುತ್ತಿರುವ ಅಭಿಮಾನಿಗಳು

ಪವರ್ ಸ್ಟಾರ್ ಪುನೀತ್ ಜೀವನಗಾಥೆಯನ್ನು ಸಿನಿಮಾ ಮಾಡುತ್ತಿರುವ ಅಭಿಮಾನಿಗಳು
ಬೆಂಗಳೂರು , ಸೋಮವಾರ, 27 ಜನವರಿ 2020 (09:17 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೇಲೆ ನಾನಾ ರೀತಿಯಲ್ಲಿ ಅಕ್ಕರೆ ತೋರುವ ಅಭಿಮಾನಿಗಳಿದ್ದಾರೆ. ಆದರೆ ಈ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜೀವನಗಾಥೆಯನ್ನೇ ಸಿನಿಮಾ ಮಾಡುವ ಮೂಲಕ ಅಭಿಮಾನ ತೋರಿಸಲು ಮುಂದಾಗಿದ್ದಾರೆ.


ಪುನೀತ್ ಅಪ್ಪಟ ಅಭಿಮಾನಿಗಳಾದ ತೇಜಸ್ ರಂಗನಾಥ್, ಮನೋಜ್ ಕುಮಾರ್, ತಿಲಕ್ ಗೌಡ, ಪೃಥ್ವಿರಾಜ್ ಮುಂತಾದ ಸ್ನೇಹಿತರ ಬಳಗ ‘ಅಜಾತಶತ್ರು’ ಎಂಬ ಟೈಟಲ್ ನಲ್ಲಿ ಕಿರು ಚಿತ್ರವೊಂದನ್ನು ತಯಾರಿಸಲಿದ್ದಾರೆ.

ಪುನೀತ್ ಕೇವಲ ನಟನಾಗಿ ಮಾತ್ರವಲ್ಲದೆ, ತೆರೆ ಹಿಂದೆ ಮಾಡಿರುವ ಉತ್ತಮ ಕೆಲಸಗಳನ್ನು ಈ ಕಿರುಚಿತ್ರದಲ್ಲಿ ತೋರಿಸಲು ಅಭಿಮಾನಿಗಳ ಬಳಗ ತೀರ್ಮಾನಿಸಿದೆ. ಮಾರ್ಚ್ 17 ರಂದು ಪುನೀತ್ ಹುಟ್ಟುಹಬ್ಬದ ದಿನ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಂಜೀವ್ ಕುಲಕರ್ಣಿ ನೆನೆದು ಆಂಕರ್ ಅನುಶ್ರೀ ಭಾವುಕರಾಗಿದ್ದು ಯಾಕೆ?