Publish Date: Mon, 27 Jan 2020 (09:01 IST)
Updated Date: Mon, 27 Jan 2020 (09:03 IST)
ಬೆಂಗಳೂರು: ನಿನ್ನೆಯಷ್ಟೇ ನಿಧನರಾದ ಕಿರುತೆರೆ ನಟ, ನಿರೂಪಕ ಸಂಜೀವ್ ಕುಲಕರ್ಣಿ ನಿಧನಕ್ಕೆ ಕಂಬನಿ ಮಿಡಿದ ಆಂಕರ್ ಅನುಶ್ರೀ ಅವರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ನಟ ಸಂಜೀವ್ ಕುಲಕರ್ಣಿ ಅನಾರೋಗ್ಯದಿಂದಾಗಿ ನಿಧನರಾದರು. ಅವರ ಬಗ್ಗೆ ನೆನೆದುಕೊಂಡು ಭಾವುಕರಾದ ಅನುಶ್ರೀ ತಮ್ಮ ಜೀವನದಲ್ಲಿ ಅವರು ಹೇಗೆ ಸ್ಪೂರ್ತಿಯಾಗಿದ್ದರು ಎಂದು ಬರೆದುಕೊಂಡಿದ್ದಾರೆ.
ನಾನು ಈಟಿವಿಯಲ್ಲಿ ನೋಡಿದ ಕಾರ್ಯಕ್ರಮವೊಂದರಲ್ಲಿ ಅವರ ಗಂಭೀರ ಕಂಠಕ್ಕೆ ಮಾರು ಹೋಗಿದ್ದೆ. ಎರಡು ವರ್ಷಗಳ ಹಿಂದೆ ಅವರು ನನ್ನನ್ನು ಭೇಟಿಯಾದಾಗ ಏ ಅನುಶ್ರೀ ಏನಮ್ಮಾ ಎಷ್ಟು ಚೆನ್ನಾಗಿ ಮಾತಾಡ್ತೀಯಾ, ನಿನ್ನ ಭಾಷೆ ಶುದ್ಧವಾಗಿದೆ ಎಂದು ಬೆನ್ನುತಟ್ಟಿದ್ದರು. ಅವರು ನನಗೆ ಸ್ಪೂರ್ತಿಯಾಗಿದ್ದವರು. ಅವರು ಇಂದು ನಮ್ಮೊಂದಿಗಿಲ್ಲ ಎಂದು ದುಃಖ, ಆಘಾತವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.